ಹುಬ್ಬಳ್ಳಿ: ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಶಾಲಾ ಕಾಲೇಜುಗಳಿಗೆ ನವೆಂಬರ್ 2 ರಿಂದ ಶಿಕ್ಷಕರು ಶಾಲೆಗಳಿಗೆ ಹಾಜರಾಗುವಂತೆ ನಿರ್ದೇಶನ ನೀಡದ ಹಿನ್ನೆಲೆಯಲ್ಲಿಂದು ಶಾಲೆಗಳತ್ತ ಶಿಕ್ಷಕರು ಮುಖ ಮಾಡಿದರು.
ಲಾಕ್ ಡೌನ್ ಸಂದರ್ಭದಲ್ಲಿ ಬಂದ್ ಆಗಿದ್ದ ಶಾಲೆಗಳಿಗೆ ಅನ್ ಲಾಕ್ ಬಳಿಕ ಸರ್ಕಾರ ನವೆಂಬರ್ 02ರಿಂದ ಶಾಲಾ ಶಿಕ್ಷಕರು ಹಾಜರಾಗುವಂತೆ ನಿರ್ದೆಶನ ನೀಡಿದ ಬೆನ್ನಲ್ಲೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಗೆ ಶಿಕ್ಷಕರು ಹಾಜರಾಗಿದ್ದು,ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥ ನಾತು ಅವರು ಶಿಕ್ಷಕರೊಂದಿಗೆ ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದರು.
ತರಗತಿಯಲ್ಲಿ ಮಾಡಬೇಕಾದ ಮಾರ್ಪಾಡು ಹಾಗೂ ಸಾಮಾಜಿಕ ಅಂತರ ಹಾಗೂ ವಿದ್ಯಾರ್ಥಿಗಳಲ್ಲಿರುವ ಆತಂಕವನ್ನು ದೂರ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
Kshetra Samachara
02/11/2020 08:01 pm