ಹುಬ್ಬಳ್ಳಿ: ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ (ನೀಟ್) ಪರೀಕ್ಷೆಯಲ್ಲಿ 600ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾನಿಕೇತನ ಪಿಯು ಕಾಲೇಜಿನಲ್ಲಿ ಸನ್ಮಾನಿಸಲಾಯಿತು.
ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ (ನೀಟ್) ಪರೀಕ್ಷೆಯಲ್ಲಿ ಚೌಗಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ 5 ವಿದ್ಯಾರ್ಥಿಗಳು 720ಕ್ಕೆ 600ಕ್ಕಿಂತ ಅಧಿಕ ಅಂಕಗಳನ್ನು ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. ವಿನಯ ಶಲವಡಿ 647 ಅಂಕಗಳನ್ನು ಪಡೆದು ‘ನೀಟ್’ನಲ್ಲಿ ಮಹಾವಿದ್ಯಾಲಯಕ್ಕೆ ಪ್ರಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾನೆ.
ಸುಮಾ ರಾಶಿನಕರ 629 ಅಂಕ, ಅರ್ಚನಾ ಕೊಟಗಿ625 ಅಂಕ, ಸಂಸ್ಕೃತಿ ಬಿಳಗಿ 622 ಅಂಕ ಹಾಗೂ ನಜ್ಮಾ ಕಮ್ಮಾರ 616 ಅಂಕಗಳ ಗಳಿಸಿದ್ದಾರೆ. ಅವರಿಗೆ ಮಹಾವಿದ್ಯಾಲಯದಲ್ಲಿ ಆತ್ಮೀಯ ಸನ್ಮಾನ ಮಾಡಲಾಯಿತು. ಚೌಗಲಾ ಶಿಕ್ಷಣ ಸಂಸ್ಥೆಯ ಕಾರ್ಯಾಧಕ್ಷಣಿಯಾದ ಶ್ರೀದೇವಿ ಚೌಗಲಾ, ಕಾರ್ಯದರ್ಶಿಗಳಾದ ಪ್ರೊ. ಅನಿಲಕುಮಾರ ಚೌಗಲಾ, ನಿರ್ದೇಶಕರುಗಳಾದ ಡಾ. ರಮೇಶ ಭಂಡಿವಾಡ ಹಾಗೂ ಪ್ರೊ. ಗಂಗಾಧರ ಕಮಡೊಳ್ಳಿ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆನಂದ ಮುಳಗುಂದ ಈ ಎಲ್ಲ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಗೌರವಿಸಿ ವಿದ್ಯಾರ್ಥಿಗಳ ಭವಿಷ್ಯವು ಉತ್ತರೋತ್ತರ ಅಭಿವೃದ್ಧಿಯಾಗಲೆಂದು ಶುಭ ಹಾರೈಸಿದರು.ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಶುಭ ಕೋರಿದ್ದಾರೆ.
Kshetra Samachara
19/10/2020 07:42 pm