ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ-ಧಾರವಾಡ daily roundup 30.03.2022

1.

ಪ್ರಾಜೆಕ್ಟ್ ಕೊಡಿಸೋದಾಗಿ ವಂಚನೆ

ಸಾಫ್ಟ್‌ವೇರ್ ಕಂಪನಿಯ ಪ್ರಾಜೆಕ್ಟ್ ಕೊಡಿಸೋದಾಗಿ ಹೇಳಿ ವಿಜಯ ರಾಥೋಡ್ ಎಂಬ ಉದ್ಯಮಿಯಿಂದ 3.50 ಕೋಟಿ ವಂಚಿಸಿದ ಆರೋಪ ಕೇಳಿ ಬಂದಿದೆ. ಅಮಿತ್ ಪ್ರಭು, ಅಂಕಿತಾ ಕಾಮತ್, ದೀಪಕ್ ಸುಂದರ್‌ ರಾಜನ್ ಹಾಗೂ ಶ್ರವಣಕುಮಾರ್ ಎಂಬಾತರು ವಂಚಿಸಿದ್ದಾರೆಂಬ ಆರೋಪವಿದೆ. ಈ ಬಗ್ಗೆ ಹುಬ್ಬಳ್ಳಿ ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ.

https://publicnext.com/article/nid/-Dharwad/Crime/node=628814

2.

ಸಾಲ ಕೊಡಿಸೋದಾಗಿ ನಂಬಿಸಿ ವಂಚನೆ

ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸೋದಾಗಿ ನಂಬಿಸಿ ವಂಚಿಸಿದ ಸಂಗತಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಶಾಹೀನ್ ರಿಯಾಜ್ ಅಹ್ಮದ್ ಜೋಪಡಿ ಎಂಬಾಕೆ ಮಹಿಳೆಯರ ಆಧಾರ್ ಕಾರ್ಡ್ ಹಾಗೂ ದಾಖಲೆ ಪಡೆದು ಆ ಮೂಲಕ ಸಾಲ ತೆಗೆದಿದ್ದಾಳೆ. ನಂತರ ದಾಖಲೆ ನೀಡಿದಿವರಿಗೆ ಸಾಲ ಮೊತ್ತದ ಅರ್ಧ ಹಣ ನೀಡಿ ಮೋಸ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.

https://publicnext.com/article/nid/Hubballi-Dharwad/Crime/node=629026

3.

ಐಪಿಎಲ್ ಜೂಜುಕೋರರ ಬಂಧನ

ಐಪಿಎಲ್ ಪಂದ್ಯದ ವೇಳೆ ಬೆಟ್ಟಿಂಗ್ ಆಡುತ್ತಿದ್ದ ಮೂವರನ್ನು ಹುಬ್ಬಳ್ಳಿ ಉಪನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಜು ರೋಣದ, ಮನೀಶ್ ಕೊರವರ ಎಂಬಾತರನ್ನು ಬಂಧಿಸಿದ್ದು ಅರುಣ ಕಠಾರೆ ಎಂಬ ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ.

https://publicnext.com/article/nid/Hubballi-Dharwad/Crime/node=628802

4.

ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಿಸೋದಾಗಿ ಮೋಸ

ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಿಸುತ್ತೇವೆ ಎಂದು ನಂಬಿಸಿ ಲಿಂಕ್ ಕಳುಹಿಸಿ ಆ ಮೂಲಕ ಖಾತೆಯಲ್ಲಿದ್ದ 2ಲಕ್ಷ 85ಸಾವಿರ ಹಣ ಕೊಳ್ಳೆ ಹೊಡೆಯಲಾಗಿದೆ. ಹುಬ್ಬಳ್ಳಿ ಅಕ್ಷಯ ಕಾಲೊನಿ ನಿವಾಸಿ ಶಿವಕೀರ್ತಿ ಎಂಬುವರು ಮೋಸ ಹೋಗಿದ್ದು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

https://publicnext.com/article/nid/Hubballi-Dharwad/Crime/node=628898

5.

ನಾನು ದೇಶಭಕ್ತರನ್ನು ಪ್ರೀತಿಸುತ್ತೇನೆ

ಪ್ರಗತಿಪರರ ವಿರುದ್ಧ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಕಿಡಿ ಕಾರಿದ್ದಾರೆ. ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದಾ ದೇಶದ ಬಗ್ಗೆ ಚಿಂತಿಸುವ ಆರ್‌ಎಸ್‌ಎಸ್ ವ್ಯಕ್ತಿಯನ್ನು ನಾನು ಪ್ರೀತಿಸುತ್ತೇನೆ. ಬುದ್ಧಿಜೀವಿ ಎಂದು ಹೇಳುತ್ತ ಮಹಾಕಳ್ಳನನ್ನು ಬೆಂಬಲಿಸುವವರನ್ನು ವಿರೋಧಿಸುತ್ತೇನೆ ಎಂದಿದ್ದಾರೆ.

https://publicnext.com/article/nid/Hubballi-Dharwad/Politics/node=629104

6.

ಕಾಶಿಗೆ ಪಾದಯಾತ್ರೆ

65 ವರ್ಷ ವಯಸ್ಸಿನ ಶಿವರುದ್ರಯ್ಯ ಹಿರೇಮಠ ಅವರು ಶಿಗ್ಗಾವಿ ತಾಲೂಕಿನ ನಾರಾಯಣಪುರ ಗ್ರಾಮದಿಂದ ಕಾಶಿ ಉಜ್ಜೈನಿ ಕೇದಾರಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದಾರೆ. ಮಾರ್ಗಮಧ್ಯೆ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಜನ ಶಿವರುದ್ರಯ್ಯ ಅವರನ್ನು ಸ್ವಾಗತಿಸಿದ್ದಾರೆ. ಹಾಗೂ ಸತ್ಕಾರ ಮಾಡಿ ಮುಂದಿನ ಯಾತ್ರೆಗೆ ಬೀಳ್ಕೊಟ್ಟಿದ್ದಾರೆ.

https://publicnext.com/article/nid/Hubballi-Dharwad/Human-Stories/node=628965

7.

'ನಾಳೆಯಿಂದ ಕೆಲಸಕ್ಕೆ ಬರಬೇಡಿ'

ಕೊರೊನಾ ಸಂಕಷ್ಟ ಕಾಲದಲ್ಲಿ ಕೆಲಸ ಮಾಡಿದ್ದ ಸಿಬ್ಬಂದಿಗೆ ನಾಳೆಯಿಂದ ಕೆಲಸಕ್ಕೆ ಬರಬೇಡಿ ಎಂದು ಸೂಚಿಸಲಾಗಿದೆ. ಸದ್ಯ ಎರಡು ವರ್ಷಗಳಿಂದ ನಾವು ಸರ್ಕಾರದ ಮೇಲೆ ಭರವಸೆ ಇಟ್ಟು ಕೆಲಸ ಮಾಡಿದ್ದೆವು. ಈಗ ನಮ್ಮನ್ನು ಕೈ ಬಿಡದೇ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ನೀಡಬೇಕು ಎಂದು ಸಿಬ್ಬಂದಿ ಪ್ರತಿಭಟನೆ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

https://publicnext.com/article/nid/Hubballi-Dharwad/Health-and-Fitness/node=629007

8.

ಬಿಲ್ಡರ್‌ಗಳ ಬವಣೆ

ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆ ಏಕಾಏಕಿ ಹೆಚ್ಚಳವಾಗಿದೆ. ಹೀಗಾಗಿ ಬಿಲ್ಡರ್‌ಗಳು, ಮತ್ತು ಗುತ್ತಿಗೆದಾರರು ಕಂಗಾಲಾಗಿದ್ದಾರೆ. ಸರ್ಕಾರ ಕಟ್ಟಡ ಸಾಮಗ್ರಿಗಳ ವೆಚ್ಚವನ್ನು ಕಡಿಮೆ ಮಾಡದಿದ್ದಲ್ಲಿ ನಿರ್ಮಾಣ ಮೊತ್ತವನ್ನು ಹೆಚ್ಚಿಸುವುದು ಅನಿವಾರ್ಯವಾಗಲಲಿದೆ ಎಂದು ಬಿಲ್ಡರ್‌ಗಳು ಹೇಳಿದ್ದಾರೆ.

https://publicnext.com/article/nid/Hubballi-Dharwad/Infrastructure/node=629028

9. ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆ

ಹಾಜರಾತಿ ಕಡಿಮೆ ಇದೆ ಎಂಬ ಕಾರಣಕ್ಕೆ ಪರೀಕ್ಷಾ ಪ್ರವೇಶ ಪತ್ರ ನೀಡಲು ನಿರಾಕರಿಸಿದ ಪ್ರಾಚಾರ್ಯರ ವಿರುದ್ಧ ಕಾನೂನು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಸರ್ ಸಿದ್ದಪ್ಪ ಕಂಬಳಿ ಕಾನೂನು ಕಾಲೇಜಿನ ಎದುರು ಪ್ರತಿಭಟಿಸಿದ ವಿದ್ಯಾರ್ಥಿಗಳು ಗೈರು ಹಾಜರಾತಿಗೆ ಸಕಾರಣ ನೀಡಿದರೂ ಪ್ರವೇಶ ಪತ್ರ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ. ಇನ್ನು ತಾವು ವಿದ್ಯಾರ್ಥಿಗಳಿಗೆ ಯಾವುದೇ ಅನ್ಯಾಯ ಮಾಡಿಲ್ಲ ಎಂದು ಪ್ರಾಚಾರ್ಯ ಬೈಬಲ್ ಮುಟ್ಟಿ ಪ್ರಮಾಣ ಮಾಡಿದ್ದಾರೆ.

https://publicnext.com/article/nid/Hubballi-Dharwad/Education/node=629034

10.

'ಪರ್ವ' ಮಹಾರಂಗ ಪ್ರಯೋಗ

ಏಪ್ರಿಲ್ 12 ಹಾಗೂ 13ರಂದು ಧಾರವಾಡ ಸೃಜನಾ ರಂಗಮಂದಿರದಲ್ಲಿ ಎಸ್.ಎಲ್ ಭೈರಪ್ಪನವರ ಪರ್ವ ಮೇರು ಕೃತಿಯ ರಂಗ ಪ್ರಯೋಗ ನಡೆಯಲಿದೆ ಎಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಧಾರವಾಡದಲ್ಲಿ ಹೇಳಿದ್ದಾರೆ.

https://publicnext.com/article/nid/Hubballi-Dharwad/News/node=629190

Edited By : Nagesh Gaonkar
Kshetra Samachara

Kshetra Samachara

30/03/2022 10:05 pm

Cinque Terre

39.1 K

Cinque Terre

1