ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಂಜೂರು ಮಾಡಿಸಿದ್ದು 1 ಲಕ್ಷ ರೂ. ಕೊಟ್ಟಿದ್ದು 50 ಸಾವಿರ.. ಇದು ಖತರ್ನಾಕ್ ಲೇಡಿ ಸಂಚು...!

ಹುಬ್ಬಳ್ಳಿ: ಆಕೆ ಅದೆಷ್ಟು ಚಾಲಾಕಿ ಅಂದ್ರೆ ನಿಮಗೇ ಗೊತ್ತಿಲ್ಲದೇ ನಿಮ್ಮ ಹೆಸರಲ್ಲಿ ಲೋನ್ ತೆಗೆದುಕೊಂಡು ಉಂಡೇನಾಮ ಹಾಕ್ತಿದ್ಳು.. ಅವಳ ಮೋಸಕ್ಕೆ ಅದೆಷ್ಟೋ ಬಡಕುಟುಂಬಗಳು ಬಲಿಯಾಗಿವೆ. ಇದೀಗ ಆ ಖತರ್ನಾಕ್ ಲೇಡಿಯ ಬಣ್ಣ ಬಯಲಾಗಿದೆ. ಆಕೆ ವಿರುದ್ದ ಆ ಏರಿಯಾದ ಜನ ಠಾಣೆ ಮೆಟ್ಟಿಲೇರಿದ್ದಾರೆ...ಅಷ್ಟಕ್ಕೂ ಯಾರ್ ಆಕೆ ಅಂತೀರಾ? ಈ ಸ್ಟೋರಿ ನೋಡಿ.

ಈ ಫೋಟೋದಲ್ಲಿರೋ ಮಹಿಳೆ ಶಾಹೀನ್ ರಿಯಾಜ್ ಅಹ್ಮದ್ ಜೋಪಡಿ ಅಂತ. ಈಕೆ ಕೆಲಸ ಮಾಡ್ತಿದ್ದ ಶ್ರೀ ಮಂಜುನಾಥ ಗ್ರಾಮೀಣಾಭಿವೃಧಿ ಸಂಘದಲ್ಲಿ ಕಡಿಮೆ ದರದಲ್ಲಿ ಸಾಲ ಕೊಡಿಸುತ್ತೇನೆ ಅಂತ ನಂಬಿಸುತ್ತಿದ್ಲು. ತಮ್ಮದೇ ಏರಿಯಾದ ಹೆಣ್ಣುಮಗಳು ಅಂತ ಇವರೆಲ್ಲಾ ನಂಬಿಕೊಂಡಿದ್ದರು. ಅಷ್ಟೇ ಯಾಕೆ ಎಲ್ಲರ ಆಧಾರ್ ಕಾಡ್೯ ಹಾಗೂ ಸಹಿ ಪಡೆದು ಸಾಲ ಮಂಜೂರು ಮಾಡಿಸಿದ್ದಳು. ಅದು ತಲಾ ಒಬ್ಬರಿಗೆ ಒಂದು ಲಕ್ಷ ಸಾಲ ಮಂಜೂರು ಮಾಡಿಸಿದ್ದಾಳೆ. ಆದ್ರೆ ಇವರಿಗೆ ಮಾತ್ರ ನೀಡಿದ್ದು ಬರೀ 50 ಸಾವಿರ ರೂ.. ಆ ವಿಷಯವನ್ನ ಇವರಿಗೆಲ್ಲ ಹೇಳಿರಲಿಲ್ಲ. ಕೊನೆಗೆ ವಿಷ್ಯ ಗೊತ್ತಾಗಿದ್ದು ಮಂಜುನಾಥ ಗ್ರಾಮೀಣಾಭಿವೃದ್ಧಿ ಸಂಘ ಇವರಿಗೆ ನೋಟಿಸ್ ಕೊಟ್ಟಾಗಲೇ.. ಹೀಗಾಗಿ ಸುಮಾರು ಎಂಟತ್ತು ಜನ ಸೇರಿ ಪೊಲೀಸ್ ಠಾಣೆ ಮೆಟ್ಡಿಲೇರಿದ್ದರು. ಆದ್ರೆ ಅಲ್ಲಿಯೂ ಇವರಿಗೆ ನ್ಯಾಯ ಸಿಕ್ಕಿಲ್ಲವೆಂದು ಗೋಳಾಡುತ್ತಿದ್ದಾರೆ.

ಈಕೆ ಇದೇ ತರ 150 ಕ್ಕೂ ಹೆಚ್ಚು ಮಹಿಳೆಯರಿಗೆ ಮೋಸ ಮಾಡಿದ್ದಾಳೆ. ಎಲ್ರೂ ಪೊಲೀಸ್ ಗೆ ದೂರು ಕೊಡ್ತೀವಿ ಅಂದ್ರೆ ಈಕೆಯ ಗಂಡ ಸರ್ಕಾರಿ ನೌಕರನಾಗಿದ್ದು ಎಲ್ಲಾ ಕಾನೂನು ಗೊತ್ತಿದೆ ಅಂತ ಅವಾಜ್ ಹಾಕ್ತಿದ್ದಾರಂತೆ. ಹೀಗಾಗೇ ನಮಗೆ ನ್ಯಾಯ‌ ಕೊಡಿಸಿ ಅಂತ ಈ ಮಹಿಳೆಯರು ಅಂಗಲಾಚುತ್ತಿದ್ದಾರೆ..

ಕೆಲವೊಂದಿಷ್ಟು ಹೆಣ್ಮಕ್ಕಳು ಮನೆಯಲ್ಲಿ ತಮ್ಮ ಗಂಡಂದಿರಗೆ ಹೇಳದೆ ಸಾಲ‌ ಮಾಡಿದ್ದಾರೆ. ಇವಾಗ ವಸೂಲಿಗೆ ಬಂದ್ರೆ ಎನಪ್ಪಾ ಅನ್ನೋದೆ ದೊಡ್ಡ ಚಿಂತೆಯಾಗಿದೆ. ಅಷ್ಟರೊಳಗೆ ಪೊಲೀಸ್ ಇಲಾಖೆ ಇವರ ಸಮಸ್ಯೆ ಬಗೆಹರಿಸಿದ್ರೆ ಒಳ್ಳೆಯದು. ಹಾಗೇ ಸಿಕ್ಕ ಸಿಕ್ಕಲ್ಲಿ ಸಾಲ ಪಡೆಯೋಕು ಮುಂಚೆ ಒಂದು ಸಾರಿ ಯೋಚನೆ ಮಾಡೋದು ಒಳಿತು.....

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

30/03/2022 04:34 pm

Cinque Terre

83.01 K

Cinque Terre

16

ಸಂಬಂಧಿತ ಸುದ್ದಿ