ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಅಲ್ಲಿ ಈಗ ಮಣ್ಣು ಹಾಗೂ ಮರಳಿನ ವಾಸನೆ ಬಲು ಜೋರಾಗಿದೆ. ಬೆಟ್ಟ, ಗುಡ್ಡ, ಹೊಲಗಳನ್ನು ಅಗೆದು ಕಿರಾತಕರು ಈ ದಂಧೆಯಲ್ಲಿ ತೊಡಗಿದ್ದಾರೆ. ಕೃಷಿ ಭೂಮಿ, ಕೆರೆ ಹೀಗೆ ಎಲ್ಲೆಂದರಲ್ಲಿ ಮಣ್ಣು ಸಾಗಾಟ ಮಾಡುತ್ತಾರೆ. ಇದರಲ್ಲಿ ಯಾರೆಲ್ಲಾ ಶಾಮೀಲಾಗಿದ್ದಾರೆ ಎಂಬುದನ್ನ ತೋರಿಸ್ತೀವಿ ನೋಡಿ..
ಇತ್ತೀಚಿನ ದಿನಗಳಲ್ಲಿ ಮರಳು ಸಾಗಾಟ ಬಲು ಜೋರಾಗಿದೆ. ಯಾಕಂದ್ರೆ ಮೊದಲಿಗಿಂತಲೂ ಸ್ವಲ್ಪ ಈಗ ಮರಳಿನ ರೇಟ್ ಜಾಸ್ತಿ ಆಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಇನ್ನೂ ಜಾಸ್ತಿ ಆಗಲು ಅದೂ ಕಾರಣ ಬೇರೆನೇ ಇದೆ. ಧಾರವಾಡ ಜಿಲ್ಲೆಯಲ್ಲಿ ಪರವಾನಗಿ ಇಲ್ಲದೇ ಮಣ್ಣು, ಮರಳು ಮಾಫಿಯಾ ದಂಧೆ ನಡೆಯುತ್ತಿದೆ. ಇದರಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ನಾಯಕರು ಶಾಮೀಲಾಗಿದ್ದಾರಾ ಎಂಬ ಅನುಮಾನ ಮೂಡಿದೆ. ಅಕ್ರಮ ಮಣ್ಣು, ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿದ್ದರೂ ಸಂಬಂಧಿಸಿದ ಭೂ ಇಲಾಖೆ ಅಧಿಕಾರಿ, ಪೊಲೀಸ್ ಇಲಾಖೆ ಇದನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳದೆ ಕಂಡೂ ಕಾಣದಂತೆ ಕಣ್ಣು ಮುಚ್ಚಿಕೊಂಡಿರುವುದನ್ನು ನೋಡಿದರೆ 'ಬೇಲಿಯೇ ಎದ್ದು ಹೊಲ ಮೇಯ್ದಂತೆ' ಎಂಬ ಗಾದೆ ಎಲ್ಲರಿಗೂ ನೆನಪು ಆಗುತ್ತೆ.
ಇನ್ನೂ ಮರಳು ದಂಧೆ ಟಿಪ್ಪರಲ್ಲಿ ಹೇಗೆ ಸಾಗಾಟ ಮಾಡ್ತಾರೆ? ಎಲ್ಲೆಲ್ಲಿ ಇದರ ವಾಸನೆ ಇದೆ ಗೊತ್ತಾ? ಹುಬ್ಬಳ್ಳಿಯ ಕಾರವಾರ ರೋಡ್, ಗುಡಿಹಾಳ ರೋಡ್, ಅಂಚಟಗೇರಿ ಕ್ರಾಸ್ ಮತ್ತು ಗಬ್ಬೂರು ಬೈಪಾಸ್ ಹೊರವಲಯ ಹಾಗೂ ಕೇಶ್ವಾಪೂರ ಮಾರ್ಗದ ಮೂಲಕ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಅಂತಹ ಮರಳು ಅಡ್ಡೆಗಳ ಮೇಲೆ ದಾಳಿ ಮಾಡುವ ಮೂಲಕ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕು ಎಂಬುದು ಎಲ್ಲರ ಒತ್ತಾಯ ಆಗಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
Kshetra Samachara
13/12/2024 03:39 pm