ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬೆಲೆ ಏರಿಕೆಗೆ ಮನೆ ನಿರ್ಮಾಣದ ಕನಸು ಮತ್ತಷ್ಟು ಕಠಿಣ: ಮತ್ತಷ್ಟು ಹೊರೆಯಾದ ಸಿಮೆಂಟ್, ಸ್ಟೀಲ್

ಹುಬ್ಬಳ್ಳಿ: ಸ್ವಂತಕ್ಕೊಂದು ಬೆಚ್ಚನೆಯ ಗೂಡಿರಬೇಕು ಎಂಬುದು ಎಲ್ಲರ ಕನಸು. ಸ್ವಂತ ಸೂರಿನ ಕನಸು ನನಸಾಗಿಸಲು ಹೊರಟವರ ಕೈಗಳಿಗೆ ಬೆಲೆ ಏರಿಕೆಯ ಬಿಸಿಯಲ್ಲಿ ಕಾದಿರುವ ಕಬ್ಬಿಣ ಬರೆ ಹಾಕುತ್ತಿದ್ದರೆ, ಸುಡುತ್ತಿರುವ ಸಿಮೆಂಟ್ ಅವರ ಕನಸಿಗೇ ಕೊಳ್ಳಿ ಇಟ್ಟಿದೆ. ಇನ್ನು ಮನೆ ನಿರ್ಮಾಣ ಮಾಡುವ ಬಿಲ್ಡರ್‌ಗಳ ದರ ಹೆಚ್ಚಳ ಮಾಡುತ್ತಿರುವುದು ಕಾದ ಹಂಚಿನ ಮೇಲೆ ನೀರು ಸುರುವಿದಂತಾಗುತ್ತಿದೆ. ಹಾಗಿದ್ದರೇ ಏನಿದು ಸ್ಟೋರಿ ಅಂತೀರಾ ತೋರಿಸ್ತೀವಿ ನೋಡಿ..

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರದಿಂದ ಜನರು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನವೊಂದಕ್ಕೆ ಅಗತ್ಯವಸ್ತುಗಳು ಮಾತ್ರವಲ್ಲದೆ ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆಯೂ ಗಗನಕ್ಕೆ ಏರುತ್ತಿದೆ. ಇದರಿಂದ ಮನೆ ನಿರ್ಮಾಣದ ಕನಸು ಕಂಡವರಿಗೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಅಲ್ಲದೇ ಮನೆ ನಿರ್ಮಾಣ ಮಾಡಿಕೊಡುವ ಬಿಲ್ಡರ್‌ಗಳು ಕೂಡ ದರ ಹೆಚ್ಚಳದ ಹಾದಿಯನ್ನು ಹಿಡಿಯಬೇಕಾಗಿದೆಯಂತೆ. ಕಡಿಮೆ ವೆಚ್ಚದಲ್ಲಿ ಸೂರನ್ನು ಕಟ್ಟಿಕೊಡುತ್ತಿದ್ದ ಹುಬ್ಬಳ್ಳಿಯ ಕ್ರೆಡಾಯ್ ಈಗ ದರ ಹೆಚ್ಚಳದ ಹಾದಿ ಹಿಡಿದಿದೆ. ಏಕಾಏಕಿ ಬೆಲೆ ಏರಿಕೆಯಿಂದ ಅನಿವಾರ್ಯವಾಗಿ ದರ ಹೆಚ್ಚಳ ಮಾಡಬೇಕಾಗಿದೆ. ಸರ್ಕಾರ ಏನಾದರೂ ಬೆಲೆ ಇಳಿಕೆ ಹಾಗೂ ಜಿ.ಎಎಸ್‌ಟಿಯಲ್ಲಿ ಸಡಿಲಿಕೆ ಕೊಟ್ಟರೆ ಅನುಕೂಲವಾಗುತ್ತದೆ ಎನ್ನುತ್ತಾರೆ ‌ಬಿಲ್ಡರ್ ಅಸೋಸಿಯೇಷನ್ ಮುಖ್ಯಸ್ಥರು.

ಒಟ್ಟಿನಲ್ಲಿ ಮನೆ ನಿರ್ಮಾಣದ ಕನಸು ಬೆಲೆ ಏರಿಕೆಯಿಂದ ಮತ್ತಷ್ಟು ಕಠಿಣಗೊಳ್ಳುತ್ತಿದೆ. ಇದರಿಂದ ಸರ್ಕಾರ ಸೂಕ್ತ ಕ್ರಮಗಳನ್ನು ಜರುಗಿಸಿ ಬೆಲೆ ಏರಿಕೆಯಿಂದ ಜನರನ್ನು ಹಾಗೂ ಉದ್ಯಮಗಳನ್ನು ಸಂರಕ್ಷಣೆ ಮಾಡಬೇಕು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.

-ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ

Edited By : Shivu K
Kshetra Samachara

Kshetra Samachara

30/03/2022 04:38 pm

Cinque Terre

31.17 K

Cinque Terre

16

ಸಂಬಂಧಿತ ಸುದ್ದಿ