ಕುಂದಗೋಳ : ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬ ಮಾತಿನಂತೆ ಇಲ್ಲೊಬ್ಬರು ತಮ್ಮ ಇಳಿ ವಯಸ್ಸಿನಲ್ಲಿ ಪಾದಯಾತ್ರೆ ಮೂಲಕ ಉಜ್ಜಯಿನಿ ಕಾಶಿ ಕೇದಾರಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ.
ಹೌದು ! ಇವರ ಹೆಸರು ಶಿವರುದ್ರಯ್ಯ ಚನ್ನವೀರಯ್ಯ ಹೀರೆಮಠ. ತಮ್ಮ 65ನೇ ಇಳಿವಯಸ್ಸಿನಲ್ಲಿ ಪಾದಯಾತ್ರೆ ಮೂಲಕ ಉಜ್ಜಯಿನಿ ಕಾಶಿ ಕೇದಾರಕ್ಕೆ ಪಾದಯಾತ್ರೆ ಕೈಗೊಳ್ಳುವ ನಿರ್ಧಾರ ಮಾಡಿ ಪ್ರಯಾಣ ಆರಂಭಿಸಿ ಈಗಾಗಲೇ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮ ತಲುಪಿದ್ದಾರೆ.
ಶಿಗ್ಗಾಂವಿ ತಾಲೂಕಿನ ನಾರಾಯಣಪುರ ಗ್ರಾಮದಿಂದ ಉಜ್ಜಯಿನಿ ಕಾಶಿ ಕೇದಾರಕ್ಕೆ ಪಾದಯಾತ್ರೆ ಕೈಗೊಂಡ ಶಿವರುದ್ರಯ್ಯನವರನ್ನು ಹಿರೇಹರಕುಣಿ ಗ್ರಾಮಸ್ಥರು ಸತ್ಕರಿಸಿದ್ರು. ಊಟ ಉಪಚಾರದ ವ್ಯವಸ್ಥೆ ಜೊತೆಗೆ ಭಜನಾ ಪದಗಳನ್ನು ಹಾಡುತ್ತಾ ಗ್ರಾಮದಲ್ಲಿ ಮೆರವಣಿಗೆ ಕೈಗೊಂಡು ತೀರ್ಥ ಕಾಣಿಕೆ ನೀಡಿ ತೀರ್ಥಕ್ಷೇತ್ರ ಯಾತ್ರೆಗೆ ಬೀಳ್ಕೊಟ್ಟಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/03/2022 02:49 pm