ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಲ್ಲಿ ಪ್ರಸಕ್ತ ವರ್ಷ ಅದ್ಧೂರಿಯಿಂದ ನಡೆಯಲಿದೆ ದಸರಾ ಜಂಬೂಸವಾರಿ!

ಧಾರವಾಡ: ಕಳೆದ ಎರಡ್ಮೂರು ವರ್ಷಗಳಿಂದ ತನ್ನ ಕಳೆ ಕಳೆದುಕೊಂಡಿದ್ದ ಧಾರವಾಡದ ದಸರಾ ಜಂಬೂ ಸವಾರಿ ಉತ್ಸವ ಪ್ರಸಕ್ತ ವರ್ಷ ಅದ್ಧೂರಿಯಿಂದ ನಡೆಯಲಿದೆ.

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಉತ್ಸವ ಸಮಿತಿ ಅಧ್ಯಕ್ಷ ಗುರುರಾಜ ಹುಣಸಿಮರದ, ಸೋಮವಾರ ಸಂಜೆ 6-30ಕ್ಕೆ ಗಾಂಧಿನಗರದ ಈಶ್ವರ ದೇವಸ್ಥಾನಲ್ಲಿ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು. ಸೆ.30 ರಂದು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಯುವಜನೋತ್ಸವ ಹಾಗೂ ಮಕ್ಕಳ ವಿವಿಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 2 ರಂದು ಮಧ್ಯಾಹ್ನ 3-30ಕ್ಕೆ ಕವಿವ ಸಂಘದಲ್ಲಿ ದೇಹಧಾಡ್ಯ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.

ಕಳೆದ 18 ವರ್ಷಗಳಿಂದ ಈ ದಸರಾ ಜಂಬೂ ಸವಾರಿ ಉತ್ಸವವನ್ನು ಹಮ್ಮಿಕೊಳ್ಳುತ್ತ ಬರಲಾಗಿದೆ. ಎರಡು ಆನೆಗಳು ಸಹ ಬರಲಿದ್ದು, ಒಂದು ಆನೆ ಮೇಲೆ ದೇವಿ ಮೂರ್ತಿ, ಇನ್ನೊಂದು ಆನೆ ಮೇಲೆ ಆಂಜನೇಯನ ಮೂರ್ತಿ ಮೆರವಣಿಗೆ ಮಾಡಲಾಗುವುದು. ಇಷ್ಟು ವರ್ಷಗಳಿಂದ ಈ ಉತ್ಸವ ಮಾಡುತ್ತ ಬರಲಾಗಿದ್ದರೂ ಸರ್ಕಾರದಿಂದ ಯಾವುದೇ ಸವಲತ್ತು ಸಿಕ್ಕಿಲ್ಲ ಎಂದರು.

ಅಕ್ಟೋಬರ್ 1 ರಿಂದ 3ರ ವರೆಗೆ ಲಿಂಗಾಯತ ಭವನದಲ್ಲಿ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳು ನಡೆಯಲಿವೆ. ಅಕ್ಟೋಬರ್ 4 ರಂದು ಮಧ್ಯಾಹ್ನ 2-30ಕ್ಕೆ ಭಾರಿ ದಸರಾ ಜಂಬೂ ಸವಾರಿ ಉತ್ಸವ ನಡೆಯಲಿದೆ. ಈ ಉತ್ಸವ ಧಾರವಾಡದ ವಿವಿಧ ಮಾರ್ಗಗಳಲ್ಲಿ ಸಂಚರಿಸಲಿದೆ. ಪ್ರತಿವರ್ಷ ಎರಡು ಉತ್ಸವಗಳು ನಡೆಯುತ್ತಿದ್ದವು. ಪ್ರಸಕ್ತ ವರ್ಷ ಎರಡೂ ಸೇರಿ ಒಂದೇ ಉತ್ಸವ ನಡೆಸಲಾಗುತ್ತಿದೆ ಎಂದರು.

Edited By : Nagesh Gaonkar
Kshetra Samachara

Kshetra Samachara

24/09/2022 06:21 pm

Cinque Terre

91.06 K

Cinque Terre

0

ಸಂಬಂಧಿತ ಸುದ್ದಿ