ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಅಶ್ವೀನಿ ಅವಾರ್ಡ್ಸ್ ಫಾರ್ ಎಕ್ಸ್ ಲೆನ್ಸ್ ವತಿಯಿಂದ ಪ್ರತಿಭಾವಂತರಿಗೆ ಪ್ರಶಸ್ತಿ ವಿತರಣೆ

ಹುಬ್ಬಳ್ಳಿ : ಅಶ್ವೀನಿ ಅವಾರ್ಡ್ಸ್ ಫಾರ್ ಎಕ್ಸ್ಲೆನ್ಸ್ ವತಿಯಿಂದ, 2021-22ನೇ ಶೈಕ್ಷಣಿಕ ವರ್ಷದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳಲ್ಲಿ 90% ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತಮ ಸಾಧನೆ ಮಾಡಿದ 5 ವಿದ್ಯಾರ್ಥಿಗಳಿಗೆ ಮತ್ತು ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ 3 ವಿದ್ಯಾರ್ಥಿಗಳಿಗೆ ಇಂದು ನಗರದ ಪ್ರೈಮೆಸಿಸ್ ಹುಬ್ಬಳ್ಳಿ ಕ್ರಿಕೆಟ್ ಅಕ್ಯಾಡೆಮಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ HCA ಸಂಸ್ಥಾಪಕ ಪಾಲುದಾರರು, ಹೆಚ್.ಎನ್ ನಂದಕುಮಾರ್ ಮತ್ತು ಮಾತೃ ಛಾಯಾ ಬಾಲ ಕಲ್ಯಾಣ ಕೇಂದ್ರದ ಕಾರ್ಯದರ್ಶಿಗಳಾದ ಭಾರತಿ ನಂದಕುಮಾರ ಅವರು ಸುಮಾರು 8 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶ್ರೀನಾಥ್ ಅವರು ವಹಿಸಿದ್ದು, ಈ ಸಂದರ್ಭದಲ್ಲಿ ಹಿರಿಯ ತರಬೇತಿದಾರರು, ಪಾಲಕರು ಸೇರಿದಂತೆ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

11/09/2022 05:42 pm

Cinque Terre

100.45 K

Cinque Terre

0

ಸಂಬಂಧಿತ ಸುದ್ದಿ