ನವಲಗುಂದ : ನವಲಗುಂದ ತಾಲೂಕಿನ ಖನ್ನೂರ ಗ್ರಾಮದ ಸುಪ್ರಸಿದ್ದ ದೇವಸ್ಥಾನದಲ್ಲಿ ಒಂದಾದ ಶ್ರೀ ಮೋಟ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಮಾರುತಿ ದೇವಸ್ಥಾನ ಮುಂಭಾಗ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸ.ರಿ.ಗ.ಮ.ಪ ಖ್ಯಾತಿಯ ಶ್ರೀರಾಮ ಕಾಸರ ಹಾಗೂ ಪ್ರಕಾಶ್ ಜಾಡರ್ ಅರ್ಪಿಸುವ ಹುಬ್ಬಳ್ಳಿ ಮೆಲೋಡಿಸ್ ಆರ್ಕೆಸ್ಟ್ರಾ ಅವರಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷರ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಾಜು ಗೌಡ ಗೌಡಪ್ಪಗೌಡ್ರ ವಹಿಸಿಕೊಂಡಿದ್ದರು.
ರಸಮಂಜರಿ ಕಾರ್ಯಕ್ರಮ ವೀಕ್ಷಿಸಲು ಖನ್ನೂರ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಾದ ಶಲವಡಿ, ನಾಯಕನೂರು, ನಾವಳ್ಳಿ, ಕಿತ್ತೂರು, ಭೋಗನೂರ ಸೇರಿದಂತೆ ಹಲವೆಡೆಯಿಂದ ಸಾರ್ವಜನಿಕರು ಕಿಕ್ಕಿರಿದು ಸೇರಿದ್ದರು.
Kshetra Samachara
24/08/2022 09:36 am