ಕಲಘಟಗಿ : 75 ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಕಲಘಟಗಿ ತಾಲೂಕಿನಲ್ಲಿ ಬೃಹತ್ ತ್ರಿವರ್ಣ ಧ್ವಜ ಮೆರವಣಿಗೆ ನಡೆಯಿತು.
ಮಾಜಿ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಸುಮಾರು 9 ಕಿ.ಮೀ ಉದ್ಧದ ಧ್ವಜದ ಮೆರಣಿಗೆ ನಡೆಯಿತು.
ಇನ್ನು ಈ ಮೆರವಣಿಗೆಗೆ ರಾಜ್ಯದ ನಾನಾ ಭಾಗಗಳಿಂದ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನ ಆಗಮಿಸಿದ್ದರು. ಧ್ವಜದ ಮೆರವಣಿಗೆಯ ಮುಂದೆ ಸಾವಿರಾರು ಹೆಣ್ಣು ಮಕ್ಕಳು ಕುಂಬ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಅದೇ ರೀತಿ ಮೆರವಣಿಗೆಯಲ್ಲಿ ಗೊಂಬೆ ಕುಣಿತ ಡೋಳ್ಳು ಕುಣಿತ ಹಾಗೂ ಹಲವಾರು ಕಲಾತಂಡಗಳು ಭಾಗವಸಿದ್ದವು.
ಸುಮಾರು 9 ಕಿ.ಮೀ ಉದ್ದ ಹಾಗೂ 9 ಅಡಿ ಅಗಲದ ರಾಷ್ಟ್ರಧ್ವಜವನ್ನು ಹಿಡಿಯಲು ವಿದ್ಯಾರ್ಥಿಗಳು ಸಂಘ
ಸಂಸ್ಥೆಗಳು ಕೂಡ ಸಾಥ್ ನೀಡಿವೆ. ಇನ್ನು ಕಾರ್ಯಕ್ರಮಕ್ಕೆ ಆಗಮಿಸಿದ ಜನರಿಗೆ ವಾಹನಗಳಲ್ಲಿ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದ್ದು, ಒಟ್ಟಾರೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯುವ ಮೂಲಕ ಇತಿಹಾಸದ ಪುಟದಲ್ಲಿ ಹೆಸರು ಮಾಡಿದಂತು ಸುಳ್ಳಲ್ಲ.
ಎನೇ ಆಗಲಿ ಮಾಜಿ ಸಚಿವರ ದೇಶ ಭಕ್ತಿ, ನಾಡ ಪ್ರೀತಿ ಕಂಡ ಜನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ: ಉದಯ ಗೌಡರ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
15/08/2022 08:34 pm