ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ನೀಲಮ್ಮನ ಕೆರೆಯ ಹೂಳೆತ್ತುವ ಕಾರ್ಯಕ್ರಮದ ಉದ್ಘಾಟನೆ

ನವಲಗುಂದ : ನವಲಗುಂದದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಅವರ ಆರ್ಥಿಕ ಸಹಾಯದೊಂದಿಗೆ ಪುರಸಭೆ ನವಲಗುಂದದ ಕೆರೆ ಅಭಿವೃದ್ಧಿ ಸಮಿತಿ ಸಹಕಾರದೊಂದಿಗೆ 453ನೇ "ನಮ್ಮೂರ ನಮ್ಮ ಕೆರೆ" ಯೋಜನೆ ಅಡಿ ಹೂಳೆತ್ತುವ ಕಾರ್ಯಕ್ರಮದ ಉದ್ಘಾಟನೆ ಹಾಗೂ ಹಸ್ತಾಂತರ ಕಾರ್ಯಕ್ರಮವನ್ನು ನವಲಗುಂದ ಪಟ್ಟಣದ ನೀಲಮ್ಮನ ಕೆರೆಯ ಆವರಣದಲ್ಲಿ ಜರುಗಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ಪರಮಪೂಜ್ಯ ಗವಿಮಠ ಶ್ರೀ ಬಸವಲಿಂಗ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು. ಇವರೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗದಗ ಜಿಲ್ಲೆಯ ನಿರ್ದೇಶಕರಾದ ಯೋಗೇಶ, ಕೆರೆ ಸಮಿತಿಯ ಉಪಾಧ್ಯಕ್ಷರಾದ ಶಂಕ್ರಪ್ಪ ಹಳ್ಳದ, ಜನಜಾಗೃತಿ ವೇದಿಕೆಯ ಸದಸ್ಯರಾದ ಅಪ್ಪಣ್ಣ ಬಾಗಿ, ಕೆರೆ ಸಮಿತಿಯ ಖಜಾನೆ ರಮೇಶ ಪಲ್ಲೇದ, ಕೆರೆ ಸಮಿತಿ ಸದಸ್ಯರಾದ ಉಸ್ಮಾನ್ ಬಾಬಾ, ತಾಲೂಕಿನ ಯೋಜನಾಧಿಕಾರಿ ಓಂ ಮರಾಠಿ, ವಲಯ ಮೇಲ್ವಿಚಾರಕರಾದ ಸುರೇಶ ಎಲಿಗಾರ್, ತಾಲೂಕಿನ ಕೃಷಿ ಮೇಲ್ವಿಚಾರಕರಾದ ಶಂಕ್ರಪ್ಪ, ನವಲಗುಂದ ಹಾಗೂ ಗುಡಿಸಾಗರ ವಲಯದ ಸೇವಾ ಪ್ರತಿನಿಧಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಒಕ್ಕೂಟ ಪದಾಧಿಕಾರಿಗಳು ಹಾಗೂ ಕೆರೆ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Edited By : PublicNext Desk
Kshetra Samachara

Kshetra Samachara

03/06/2022 07:00 pm

Cinque Terre

11.88 K

Cinque Terre

0

ಸಂಬಂಧಿತ ಸುದ್ದಿ