ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಖಾಲಿ ಗಾಡಾ ಓಡಿಸುವ ಸ್ಪರ್ಧೆ ರೈತಾಪಿ ಮಕ್ಕಳಲ್ಲಿ ಮಹಾದಾನಂದ

ಕುಂದಗೋಳ : ಈ ರೈತಾಪಿ ಸುಗ್ಗಿ ಕಾಲ ಬಂತೆಂದ್ರೇ ಸಾಕು ಈ ಹಳ್ಳಿಗರಿಗೆ ಈ ಬೇಸಿಗೆಯಲ್ಲಿ ಖಾಲಿ ಗಾಡಾ ಸ್ಪರ್ಧೆ ಕೈಗೊಳ್ಳುವುದು, ಆ ಗಾಡಾ ಓಟದ ಝಲಕ್ ಆನಂದಿಸುವುದೇ ರೈತಾಪಿ ಮಕ್ಕಳಿಗೆ ಒಂದು ಹಬ್ಬ ನೋಡಿ.

ಇಂತಹ ಹಬ್ಬದ ವಾತಾವರಣಕ್ಕೆ ಕುಂದಗೋಳ ಪಟ್ಟಣ ಸಾಕ್ಷಿಯಾಗಿ ಶ್ರೀ ಮಾರುತಿ ರಥೋತ್ಸವದ ಅಂಗವಾಗಿ ಶ್ರೀ ಕನಕದಾಸ ಗೆಳೆಯರ ಬಳಗ ಹಾಗೂ ಸಮಸ್ತ ರೈತ ಬಾಂಧವರ ಆಶ್ರಯದಲ್ಲಿ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಆಯೋಜಿಸಿ ಅದೆಷ್ಟೋ ಖಾಲಿ ಗಾಡಾ ಓಡಿಸುವ ಸ್ಪರ್ಧಾಳುಗಳ ಮನ ಗೆದ್ದಿದೆ.

ಅದರಂತೆ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಬಳಿ ಇರುವ ಟಿ.ಎಸ್.ಗೌಡಪ್ಪನವರ ಹೊಲದಲ್ಲಿ ನಡೆದ ರಾಜ್ಯ ಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆಯಲ್ಲಿ ರಾಜ್ಯದಾದ್ಯಂತ ಖಾಲಿ ಗಾಡಾ ಓಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದ ಜೋಡೆತ್ತಗಳ ಪೈಕಿ ಮೊದಲ ಬಹುಮಾನ 50 ಸಾವಿರ ರೂಪಾಯಿ ಕಾಡನಕೊಪ್ಪದ ಎತ್ತುಗಳು, ಎರಡನೇ ಬಹುಮಾನ 40 ಸಾವಿರ ರೂಪಾಯಿ ಹಿರೇಹೊನ್ನಳ್ಳಿ ಎತ್ತುಗಳು, ಮೂರನೇ ಬಹುಮಾನ 35 ಸಾವಿರ ರೂಪಾಯಿ ಬೆಳಗಾವಿ ಸಮೀಪದ ವಾಗೋಡಾ ಎತ್ತುಗಳು ಪಡೆದಿವೆ.

ಇದಲ್ಲದೆ ಕ್ರಮವಾಗಿ ಇನ್ನುಳಿದ 12 ಬಹುಮಾನ ಹಾಗೂ ಕುಂದಗೋಳ ಪಟ್ಟಣದ ಎತ್ತುಗಳ ನಾಲ್ಕು ವಿಶೇಷ ಬಹುಮಾನಗಳು ವಿಜೇತ ಜೋಡೆತ್ತುಗಳ ಪಾಲಾಗಿದೆ. ಒಟ್ಟಿನಲ್ಲಿ ಕುಂದಗೋಳ ಪಟ್ಟಣದಲ್ಲಿ ನಡೆದ ಖಾಲಿ ಗಾಡಾ ಸ್ಪರ್ಧೆ ಜನರನ್ನು ರೈತಾಪಿ ಮಕ್ಕಳನ್ನು ಹುರಿದುಂಬಿಸಿದಂತು‌ ನಿಜ.

Edited By : Manjunath H D
Kshetra Samachara

Kshetra Samachara

08/04/2022 07:11 pm

Cinque Terre

56.76 K

Cinque Terre

5

ಸಂಬಂಧಿತ ಸುದ್ದಿ