ಕುಂದಗೋಳ : ಕಣ್ಣು ಹಾಯಿಸಿದಷ್ಟೂ ದೂರ ಜನ, ಒಂದಕ್ಕಿಂತ ಒಂದು ವೇಗವಾಗಿ ಓಡುವ ಜೋಡೆತ್ತುಗಳು, ಎಲ್ಲೇಡೆ ಸಿಳ್ಳೆ, ಕೇಕೆ, ಚಪ್ಪಾಳೆ ಅಬ್ಬಾ ! ಇಷ್ಟೇಲ್ಲಾ ಸನ್ನಿವೇಶ ಕಂಡು ಬಂದಿದ್ದು, ಕುಂದಗೋಳದ ಖಾಲಿ ಗಾಡಾ ಓಡಿಸುವ ಸ್ಪರ್ಧೆಯಲ್ಲಿ.
ಶ್ರೀ ಮಾರುತಿ ದೇವಸ್ಥಾನ ಮೂರಂಗಡಿ ಕೂಟ್ ಹಾಗೂ ಕುಂದಗೋಳದ ರೈತ ಬಾಂಧವರ ಆಶ್ರಯದಲ್ಲಿ ನಡೆದ, ರಾಜ್ಯ ಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆಯನ್ನು ಕಲ್ಯಾಣಪುರ ಬಸವಣ್ಣಜ್ಜನವರ ದಿವ್ಯ ಸಾನಿಧ್ಯದಲ್ಲಿ ಕಾಂಗ್ರೆಸ್ ಮುಖಂಡ ರಮೇಶ್ ಕೊಪ್ಪದ ಚಕ್ಕಡಿ ನಡೆಸುವ ಮೂಲಕ ಉದ್ಘಾಟಿಸಿದರು.
ಬಳಿಕ ಸಂಜೆ ಏಳು ಗಂಟೆ ಮೂವತ್ತು ನಿಮಿಷದವರೆಗೂ ನಡೆದ, ಬಹು ಜಿದ್ದಾಜಿದ್ದಿನ ಖಾಲಿ ಗಾಡಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 50 ಸಾವಿರ ರೂಪಾಯಿ ನಾರಾಯ ಕಾರವಕರ ಮದೇಕೊಪ್ಪ ಬೆಂಗಾವಿ ಜೋಡೆತ್ತು, ಎರಡನೇ ಬಹುಮಾನ ಸೋಮಲಿಂಗಪ್ಪ ಪ್ರಸನ್ನ ದೇವಗಿರಿ ಜೋಡೆತ್ತು, ಮೂರನೇ ಬಹುಮಾನವನ್ನು ಬಸವೇಶ್ವರ ಪ್ರಸನ್ನ ಹತ್ತಿಮತ್ತೂರ ಜೋಡೆತ್ತುಗಳು ಪಡೆದವು.
ಇನ್ನುಳಿದ ಕ್ರಮವಾದ 12 ಬಹುಮಾನಗಳನ್ನು ವಿವಿಧ ಜೋಡೆತ್ತುಗಳು ಹಾಗೂ ಕಮೀಟಿ ವತಿಯಿಂದ ನೀಡಲಾದ ಮೂರು ವಿಶೇಷ ಬಹುಮಾನಗಳನ್ನು ಕುಂದಗೋಳದ ಜೋಡೆತ್ತುಗಳು ಬಾಚಿಕೊಂಡವು.
ಖಾಲಿ ಗಾಡಾ ಓಟದ ಸ್ಪರ್ಧೆಯನ್ನು ಅಷ್ಟೇ ಅಚ್ಚುಕಟ್ಟಾಗಿ ಅನ್ನಸಂತರ್ಪಣೆ ಕಾರ್ಯಕ್ರಮದ ಜೊತೆ ಶ್ರೀ ಮಾರುತಿ ದೇವಸ್ಥಾನ ಮೂರಂಗಡಿ ಕೂಟ್ ಹಾಗೂ ಪಟ್ಟಣದ ರೈತ ಬಾಂಧವರು ನಡೆಸಿಕೊಟ್ಟರು.
Kshetra Samachara
06/03/2022 10:05 pm