ಕುಂದಗೋಳ : ಅಬ್ಬಾ ಈ ಸರ್ಕಾರಿ ಶಾಲೆಗಳು ಅಲ್ಲಿನ ಕಾರ್ಯಕ್ರಮಗಳು ಏನ್ರೀ ಆ ಮಕ್ಕಳ ಚಮತ್ಕಾರ ಓದುವುದು, ಬರೆಯುವುದು ಮಾತ್ರವಲ್ಲ, ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಈ ಸರ್ಕಾರಿ ಶಾಲೆ ಮಕ್ಕಳ ಉತ್ಸಾಹ ನೋಡೋದೆ ಒಂದು ಹಬ್ಬ ನೋಡಿ.
ಅಂತಹ ಹಬ್ಬದ ವಾತಾವರಣವನ್ನು ತನ್ನ ಮಡಿಲಲ್ಲಿ ಹಾಕಿಕೊಂಡು ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ರಂಜಿಸಿದ್ದೇ, ಈ ಕುಂದಗೋಳ ತಾಲೂಕಿನ ಕಡಪಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಫಿಟ್ ಇಂಡಿಯಾ ಸಪ್ತಾಹ.
ಫಿಟ್ ಇಂಡಿಯಾ ಸಪ್ತಾಹದ ಮೊದಲ ದಿನದ ಅಂಗವಾಗಿ ಜಾನಪದ ಗೀತೆಗಳ ನೃತ್ಯ, ಕೋಲಾಟ ಶಾಲೆಯ ವಾತಾವರಣವನ್ನು ಮನರಂಜನೆಯ ತಾಣವನ್ನಾಗಿ ಮಾಡಿದ್ರೇ, ಶಿಕ್ಷಕರು ಪಾಲಕರು ತಮ್ಮ ಮಕ್ಕಳ ಪ್ರತಿಭೆ ನೋಡಿ ಮಹದಾನಂದ ಪಟ್ಟರು. ಇನ್ನೂ ದಾರಿಹೋಕರು ಸಹ ಕ್ಷಣಕಾಲ ನಿಂತು ಮಕ್ಕಳ ನೃತ್ಯ ನೋಡಿ ಚಪ್ಪಾಳೆ ತಟ್ಟಿ ಮುಂದೆ ಸಾಗಿದ್ದು ಅವರ ಪ್ರತಿಭೆಗೆ ಮತ್ತಷ್ಟೂ ಬೆಂಬಲ ತಂದಿತು.
Kshetra Samachara
01/12/2021 07:58 pm