ಧಾರವಾಡ: ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ ಹಾಗೂ ಲೋಕಾಪುರದ ವಿಶ್ವಕರ್ಮ ಆರ್ಟ್ ಕ್ರಿಯೇಷನ್ಸ್ ಸಂಯುಕ್ತ ಆಶ್ರಯದಲ್ಲಿ ಧಾರವಾಡದಲ್ಲಿ ಮೂರು ದಿನಗಳ ಕಾಲ ರಾಷ್ಟ್ರೀಯ ಚಿತ್ರಕಲಾ ಶಿಬಿರ ಮತ್ತು ಪ್ರದರ್ಶನ ಏರ್ಪಡಿಸಲಾಗಿದೆ.
ಧಾರವಾಡದ ರಂಗಾಯಣದ ಆವರಣದಲ್ಲಿ ಕಲಾ ಸಂಕ್ರಾಂತಿ ಹೆಸರಿನಲ್ಲಿ ನಡೆಯುತ್ತಿರುವ ಈ ಶಿಬಿರ ಮತ್ತು ಪ್ರದರ್ಶನವನ್ನು ಹಿರಿಯ ಚಿತ್ರಕಲಾವಿದ ಬಿ. ಮಾರುತಿ ಅವರು ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿದರು.
ಈ ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ 10 ಹಿರಿಯ ಹಾಗೂ ಕಿರಿಯ ಕಲಾವಿದರು ಚಿತ್ರಕಲೆ ಬಿಡಿಸಲಿದ್ದಾರೆ. ಜೊತೆಗೆ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಪ್ರಯುಕ್ತ ನಡೆದ ಅಂಚೆ ಕುಂಚ ಚಿತ್ರಕಲಾ ಸ್ಪರ್ಧೆಗೆ ದೇಶದ ವಿವಿಧ ಕಲಾವಿದರು ಪೋಸ್ಟ್ ಕಾರ್ಡ್ ನಲ್ಲಿ ಕಳುಹಿಸಿರುವ ಒಟ್ಟು 40 ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿದೆ.
Kshetra Samachara
12/11/2021 05:17 pm