ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕಠಿಣ ಪರಿಶ್ರಮದ ಸಿಹಿ ಫಲವೇ ಯಶಸ್ಸು

ಧಾರವಾಡ: ಕಠಿಣ ಪರಿಶ್ರಮದ ಸಿಹಿ ಫಲವೇ ಯಶಸ್ಸು, ಸತತ ಪ್ರಯತ್ನದ ಪರಿಣಾಮವೇ ಸಾಧನೆ. ನಮ್ಮ ಮಾತಿಗಿಂತ ಕಲಾಕೃತಿಗಳು ಮಾತನಾಡುವಂತಿರಬೇಕು ಕಲೆಯು ಕಲೆಗಾರನ ಸ್ವತ್ತು ಎಂದು ಹಿರಿಯ ಕಲಾವಿದ ಎಂ.ಆರ್.ಬಾಳಿಕಾಯಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದಡಿ ಧಾರವಾಡದ ಸರ್ಕಾರಿ ಕಲಾ ಗ್ಯಾಲರಿಯಲ್ಲಿ ಏರ್ಪಡಿಸಿರುವ ಸೌಜನ್ಯ ಕರಡೋಣಿ ಅವರ ಮೂರು ದಿನಗಳ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನ ಉತ್ತುಂಗ ಶಿಖರದಲ್ಲಿ ಚಿತ್ರಕಲೆ ಇದೆ. ಚಿತ್ರಕಲೆ ಭಾರತೀಯ ಮೂಲದ್ದಾಗಿದೆ. ಚಿತ್ರಕಲೆಯು ಮನುಷ್ಯನ ಆಚಾರ-ವಿಚಾರ ಬೆಳೆಸಿ ಕಲ್ಪನಾಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಮಾತನಾಡಿ, ಕಲೆ, ಕಲಾವಿದರ ಪ್ರೋತ್ಸಾಹಕ್ಕೆ ಸರ್ಕಾರ ರೂಪಿಸಿರುವ ಯೋಜನೆಗಳನ್ನು ವಿವರಿಸಿದರು.

ಹಿರಿಯ ಕಲಾವಿದ ಬಿ.ಮಾರುತಿ ಮಾತನಾಡಿ,

ನಮ್ಮ ನೆಲ-ಜಲದಲ್ಲಿ ಉತ್ತಮವಾದ ಕಲೆ ನೆಲೆಯೂರಿದೆ. ಉತ್ತಮ ಕಲೆಯನ್ನು ಕಲಾಕೃತಿಗಳನ್ನು ಹೆಮ್ಮೆಯಿಂದ ಹೊರಹಾಕಬೇಕು. ಕಲಾವಿದರು ಸತತ ಪ್ರಯತ್ನ ಮಾಡಬೇಕು. ಚಿತ್ರಕಲಾ ವಿಶ್ವವಿದ್ಯಾಲಯದ ಸ್ಥಾಪಿಸಲು ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಧಾರವಾಡದಲ್ಲಿ ಚಿತ್ರಕಲಾ ಪ್ರದರ್ಶನಕ್ಕೆ ಉತ್ತಮ ಗ್ಯಾಲರಿಯ ಅವಶ್ಯಕತೆ ಇದೆ ಎಂದರು.

ನಿವೃತ್ತ ಕೆ.ಎ.ಎಸ್.ಅಧಿಕಾರಿ ಸದಾಶಿವ ಮರ್ಜಿ ಮಾತನಾಡಿ, ಕಲೆಗಳು ಸೃಜನಶೀಲತೆಯನ್ನು ಬಯಸುತ್ತೇವೆ. ಕಲಾವಿದರು ತಮ್ಮ ಕಲಾಕೃತಿಗಳ ಮೂಲಕ ತಾವೇ ಸ್ವತಃ ಮಾರುಕಟ್ಟೆಯನ್ನು ನಿರ್ಮಾಣ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಂದ್ರಕಾಂತ ಬೆಲ್ಲದ ಮಾತನಾಡಿ, ಚಿತ್ರಕಲೆ ಪ್ರಾಚೀನ ಕಾಲದಿಂದಲೂ ಬಂದ ಒಂದು ಅದ್ಭುತ ಮಾಧ್ಯಮವಾಗಿದೆ. ಚಿತ್ರಕಲೆಯಿಂದ ಮನುಷ್ಯನ ಆಚಾರ-ವಿಚಾರ ಬುದ್ಧಿ ಕ್ಷಮತೆ ಹೆಚ್ಚಿಸಿ ಕಲ್ಪನಾಶಕ್ತಿಯನ್ನೂ ಕೂಡ ಬೆಳೆಸುತ್ತದೆ ಎಂದು ವಿಜ್ಞಾನ ಹೇಳುತ್ತದೆ ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ.ಗುಡಸಿ, ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಎನ್. ಹಂಸವೇಣಿ, ಡಾ.ಡಿ.ಬಿ.ಕರಡೋಣಿ, ಡಾ.ಬಿ.ಎಸ್.ಕುರಿಯವರ, ಡಾ.ಬೈರಣ್ಣವರ ಯಶವಂತ ಡಾ.ಬಸವರಾಜ್ ನಾಗವ್ವವನವರ, ಅನಿಲ್ ಖಾತೆದಾರ ಉಪಸ್ಥಿತರಿದ್ದರು ಜ್ಯೋತಿ ಕಾಶಿನಾಥ್ ಮಲ್ಲಪ್ಪ ಕಾರ್ಯಕ್ರಮ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

09/11/2021 10:04 pm

Cinque Terre

2.94 K

Cinque Terre

0

ಸಂಬಂಧಿತ ಸುದ್ದಿ