ಧಾರವಾಡ : ಉತ್ತರ ಕರ್ನಾಟಕ ಭಾಗದಲ್ಲಿ ರೈತರು ಸೀಗೆ ಹುಣ್ಣಿಮೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಬೆಳೆದ ಪೈರು ಹುಲುಸಾಗಿ ರೈತನ ಕೈ ಸೇರಲಿ ಎಂದು ಭೂಮಿತಾಯಿ ಮತ್ತು ಪೈರಿಗೆ ಪೂಜೆ ಸಲ್ಲಿಸುವ ವಿಶೇಷ ಹಬ್ಬವಿದು.
ಬೆಳಿಗ್ಗೆ ಹೊಲದಲ್ಲಿ ಪೈರು ಮತ್ತು ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಸ್ನೇಹಿತರು,ಬಂಧು ಬಾಂಧವರೊಂದಿಗೆ ಸಹ ಭೋಜನವನ್ನು ಮಾಡಿ ಮನೆಗೆ ಮರಳುವ ರೈತ ಸಮುದಾಯ ಅದೇ ದಿನ ರಾತ್ರಿ ವಿವಿಧ ಜಾನಪದ ಕಲೆಯ ಅನಾವರಣಗೊಳಿಸುವ ಮೂಲಕ ಸಂಭ್ರಮಿಸುತ್ತಾರೆ.
ಸದ್ಯ ಧಾರವಾಡ ಜಿಲ್ಲೆ ಮನಸೂರು ಗ್ರಾಮದಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಹೆಜ್ಜೆ ಮಜಲಿನಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಜಗತ್ತು ಆಧುನಿಕತೆಯಲ್ಲಿ ಎಷ್ಟೇ ಮುಂದುವರೆದಿದ್ದರು ನಮ್ಮ ಸಂಸ್ಕೃತಿಯ ಝಲಕ್ ಅದು ವಿಶೇಷವೇ ಸರಿ.
Kshetra Samachara
19/10/2021 10:45 pm