ಕಲಘಟಗಿ:ತಾಲೂಕಿನ ತಂಬೂರ ಗ್ರಾಮದ ಐತಿಹಾಸಿಕ ಶ್ರೀ ಬಸವಣ್ಣದೇವರ ದೇವಸ್ಥಾನದಲ್ಲಿ ಭಾನುವಾರ ಕಲಘಟಗಿ ಪಟ್ಟಣದ ಯುವಕರು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ತಂಬೂರಿನ ಚಾಲುಕ್ಯರ ಕಾಲದ ಐತಿಹಾಸಿಕ ದೇವಸ್ಥಾನದ ಜಾತ್ರಾ ಮಹೋತ್ಸವ ಮಾರ್ಚ್ 1 ರಿಂದ 6 ರವರೆಗೆ ಜರುಗಲಿರುವುದರಿಂದ, ದೇವಸ್ಥಾನದ ಆವರಣದಲ್ಲಿ ಸ್ವಚ್ಛತೆ ಕಾರ್ಯವನ್ನು ಯುವಕರು ಕೈಗೊಂಡರು.ಯುವಕರ ಸಮಾಜ ಮುಖಿ ನಿಸ್ವಾರ್ಥ ಸೇವೆಯನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.
Kshetra Samachara
28/02/2021 12:25 pm