ಕಲಘಟಗಿ: ತಾಲೂಕಿನ ಜಿನ್ನೂರು ಗ್ರಾಮದಲ್ಲಿ ಶ್ರೀ ಚನ್ನಬಸವೇಶ್ವರ ಮಹಾರಥೋತ್ಸವ ಭಕ್ತರ ಹರ್ಷೂದ್ಘಾರ ಹಾಗೂ ಮಂಗಲ ವಾಧ್ಯಗಳೊಂದಿಗೆ ಬಹು ವಿಜೃಂಭಣೆಯಿಂದ ಶನಿವಾರ ಸಂಜೆ ಜರುಗಿತು.
ನಂದಿ ಧ್ವಜ,ಡೊಳ್ಳು ಮುಂತಾದ ಮಂಗಲವಾದ್ಯಗಳೊಂದಿಗೆ ಭಕ್ತರು ರಥೋತ್ಸವವನ್ನು ನೆರವೇರಿಸಿದರು.ಭಕ್ತರು ರಥಕ್ಕೆ ಬಾಳೆ ಹಣ್ಣು ತೂರಿ ಇಷ್ಠಾರ್ಥ ಸಿದ್ಧಿಸಲಿ ಎಂದು ಬೇಡಿಕೊಂಡರು.ನಂತರ ಭಕ್ತರು ಕಾಯಿತೂಕ,ಹಣ್ಣುತೂಕ ಮುಂತಾದ ಹರಕೆಯನ್ನು ಶ್ರಿ ಚನ್ನಬಸವೇಶ್ವರನಿಗೆ ನೆರವೇರಿಸಿದರು.
ಉಳವಿ ಹಾಗೂ ಜಿನ್ನೂರಿನ ಶ್ರೀ ಚನ್ನಬಸವೇಶ್ವರ ಮಹಾರಥೋತ್ಸವ ಮಘಾ ನಕ್ಷತ್ರದಲ್ಲಿ ಒಂದೇ ದಿನ ಏಕಕಾಲದಲ್ಲಿ ನಡೆಯುವದು ವಿಶೇಷವಾಗಿದೆ.
Kshetra Samachara
27/02/2021 09:53 pm