ಧಾರವಾಡ: ತಾಲೂಕಿನ ತಡಕೋಡ ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರೆ ಹಾಗೂ ರಥೋತ್ಸವ ಸಂಭ್ರಮದಿಂದ ನಡೆಯಿತು. ಜಾತ್ರೆಯ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗುಗ್ಗುಳೋತ್ಸವ ಹಾಗೂ ಮೆರವಣಿಗೆ ನಡೆಯಿತು.
ಹಿರಿಯ ವೀರಗಾಸೆ ಕಲಾವಿದರು ಗುಗ್ಗುಳೋತ್ಸವ ನಡೆಸಿಕೊಟ್ಟರು. ನಂತರ ನಡೆದ ಮೆರವಣಿಗೆಯಲ್ಲಿ ವಿವಿಧ ಜನಪದ ಕಲಾತಂಡಗಳ ಕಲಾವಿದರು ತಮ್ಮ ಕಲೆ ಪ್ರದರ್ಶಿಸಿದರು. ಊರಿನ ಯುವಕರ ಕೋಲಾಟ ಪ್ರದರ್ಶನ ಆಕರ್ಷಕವಾಗಿತ್ತು.
ಸಂಜೆ ನಡೆದ ರಥೋತ್ಸವದಲ್ಲಿ ವೀರಭದ್ರೇಶ್ವರನ ಸಕಲ ಸದ್ಭಕ್ತರು ಪಾಲ್ಗೊಂಡು ತೇರನೆಳೆದು ಪುನೀತರಾದರು.
Kshetra Samachara
27/02/2021 08:25 pm