ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಶಿವಾಜಿ ಜಯಂತಿ, ಗಮನ ಸೆಳೆದ ರಂಗೋಲಿ ಸ್ಪರ್ಧೆ

ಕುಂದಗೋಳ : ಒಂದಕ್ಕೊಂದು ವಿಭಿನ್ನ ಎನಿಸುವ ಬಣ್ಣ ತುಂಬಿದ ರಂಗೋಲಿಗಳು, ವಯಸ್ಸಿನ ಬೇಧ ಮರೆತು ಕಲೆಯ ಸವಿ ಆನಂದಿಸಲು ರಂಗೋಲಿ ಬಿಡಿಸುತ್ತಿರುವ ಮಹಿಳೆಯರು, ಮಕ್ಕಳು. ಇದೆಲ್ಲಾ ರಂಗು ರಂಗುರಂಗಿನ ರಂಗೋಲಿ ನೋಟಗಳು ಕಂಡು ಬಂದಿದ್ದು ಕುಂದಗೋಳ ಪಟ್ಟಣದ ಮರಾಠಾ ಭವನದಲ್ಲಿ.

ಸತತ ಹತ್ತು ತಿಂಗಳು ಕಾಲ ಯಾವುದೇ ಕಲಾತ್ಮಕ ಚಟುವಟಿಕೆ ಸ್ಪರ್ಧೆ ಇರದೆ ಕೊರೊನಾ ಕಾರಣ ಮನೆಯಲ್ಲೇ ಕಾಲ ಕಳೆದಿದ್ದ ಮಹಿಳೆಯರಿಗೆ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಜೀಜಾಬಾಯಿ ಮಂಡಳದವರು ಏರ್ಪಡಿಸಿದ ರಂಗೋಲಿ ಸ್ಪರ್ಧೆಗೆ ನಿರೀಕ್ಷೆಗೂ ಮೀರಿ ಮಹಿಳೆಯರು ಹಾಜರಾಗಿ ರಂಗೋಲಿ ಬಿಡಿಸಿದರು.

ಸುಮಾರು 50 ಕ್ಕೂ ಅಧಿಕ ಜನರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಬಹುಮಾನಕ್ಕಿಂತ ಹೆಚ್ಚಾಗಿ ರಂಗೋಲಿ ಬಿಡಿ‌ಸುವುದರಲ್ಲೇ ಹೆಚ್ಚಿನ ಸಂತೋಷ ಪಟ್ಟರು.

ಒಟ್ಟಾರೆ ಸದಾ ಚಟುವಟಿಕೆಯಿಂದ ಲವಲವಿಕೆಯಿಂದ ಇರುವ ಮಹಿಳೆಯರಿಗೆ ಶಿವಾಜಿ ಜಯಂತಿ ಅಂಗವಾಗಿ ನಡೆದ ರಂಗೋಲಿ ಸ್ಪರ್ಧೆ ಸಂತೋಷದ ಜೊತೆಗೆ ಮಹಿಳೆಯರಿಗೆ ತಮ್ಮ ಕಲೆಯನ್ನು ಅನಾವರಣ ಗೊಳಿಸಲು ಸಾಕ್ಷಿಯಾಯಿತು.

Edited By : Manjunath H D
Kshetra Samachara

Kshetra Samachara

19/02/2021 03:13 pm

Cinque Terre

28.07 K

Cinque Terre

1

ಸಂಬಂಧಿತ ಸುದ್ದಿ