ಕುಂದಗೋಳ : ಭವ್ಯ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ನಿಧಿ ಸಂಗ್ರಹಣಾ ಕಾರ್ಯಾ ದೇಶಾದ್ಯಂತ ಜೋರಾಗಿದೆ.
ಅದರಂತೆ ಈ ರಾಮ ಮಂದಿರಕ್ಕೆ ಪುಟಾಣಿ ಸೈನ್ಯವೊಂದು ತಾಲು ಕೂಡಿಟ್ಟ ಕಾಸನ್ನು ರಾಮ ಮಂದಿರಕ್ಕೆ ಸರ್ಮಪಿಸಿ ಅಳಿಲು ಸೇವೆ ಗೈದಿದೆ.
ಎಸ್. ಕುಂದಗೋಳ ತಾಲೂಕಿನ ರೊಟ್ಟಿಗವಾಡ ಗ್ರಾಮದ ಗಜಾನನ ಟ್ಯೂಷನ್ ಕ್ಲಾಸಿನ 50ಕ್ಕೂ ಹೆಚ್ಚು ಮಕ್ಕಳು ಪಾಲಕರ ಸಹಕಾರದ ಜೊತೆ ಇಂತಹ ಪ್ರೇರಣೆ ತುಂಬುವ ಕೆಲಸಕ್ಕೆ ಸೈ ಎಂದಿದ್ದು, ಸ್ವತಃ ತಾವೇ ರಾಮನ ಭಾವಚಿತ್ರ ಪ್ರದರ್ಶನ ಮಾಡಿ ಸರದಿ ಸಾಲಾಗಿ ನಿಂತು ತಾವು ಸಂಗ್ರಹಿಸಿಟ್ಟ ಹಣವನ್ನು ಮಂದಿರ ನಿರ್ಮಾಣಕ್ಕೆ ಸರ್ಮಪಿಸಿದ್ದಾರೆ.
ಮಕ್ಕಳ ಈ ಮುಗ್ದ ಪ್ರೀತಿಗೆ ಇಡೀ ಗ್ರಾಮವೇ ಶಹಬ್ಬಾಸ್ ಎಂದಿದ್ದು, ಮಕ್ಕಳ ಕೆಲಸವನ್ನು ಕೊಂಡಾಡಿದ್ದಾರೆ.
Kshetra Samachara
03/02/2021 11:05 am