ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಗಣರಾಜ್ಯೋತ್ಸವದ ಹಿನ್ನೆಲೆ ವಿದ್ಯಾರ್ಥಿಗಳಿಂದ ಹೆಲ್ಮೆಟ್ ಜಾಗೃತಿ

ಧಾರವಾಡ : ಕರ್ನಾಟಕ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿ ಬಾರಿಯು ಜನರ ಜಾಗೃತಿಗಾಗಿ ಒಂದಲ್ಲಾ ಒಂದು ಕೆಲಸವನ್ನು ಮಾಡ್ತಾನೆ ಇರ್ತಾರೆ, ಅದೇ ರೀತಿ ಈ ಬಾರಿಯೂ ಕೂಡ ಗಣರಾಜ್ಯೋತ್ಸವದ ಹಿನ್ನೆಲೆ ಜನರಲ್ಲಿ ಹೆಲ್ಮೆಟ್ ಜಾಗೃತಿಯನ್ನು ಮೂಡಿಸಲು ಮುಂದಾದರು.

ಹೌದು ಧಾರವಾಡದ ಜುಬ್ಲಿ ಸರ್ಕಲ್ ನಲ್ಲಿ ಮಾನವ ಸರ್ಪಳಿ ಯಿಂದ ಕೈಯಲ್ಲಿ ಬೋರ್ಡ್ ಗಳನ್ನು ಹಿಡಿದು ಜನರಿಗೆ ಜಾಗೃತಿಗೊಳಿಸುವುದು ಅಲ್ಲದೆ, ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದ ವಾಹನ ಸವಾರರ ಬಳಿ ಹೋಗಿ ಅವರಿಗೆ ಬೋರ್ಡ್ ಗಳನ್ನು ತೋರಿಸಿ ಎಚ್ಚರಿಸಿದರು. ಇನ್ನು ಈ ವೇಳೆ ಸಂಚಾರಿ ಪೊಲೀಸರು ಸಹ ವಿದ್ಯಾರ್ಥಿಗಳೊಂದಿಗೆ ಕೈಜೋಡಿಸಿದ್ದು ವಿಶೇಷವಾಗಿತ್ತು.

ಜಾಗೃತಿ ಕಾರ್ಯಕ್ರಮದಲ್ಲಿ ಸುನೀಲ್ ಜಂಗಣಿ, ವಿಶ್ವನಾಥ್ ಸಂಧಿ , ರೇವಣ, ಗಿರೀಶ್, ರೋಹಿತ್, ಪ್ರಮೋದ ಎಂಬ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Edited By : Nagesh Gaonkar
Kshetra Samachara

Kshetra Samachara

26/01/2021 08:31 pm

Cinque Terre

19.86 K

Cinque Terre

0

ಸಂಬಂಧಿತ ಸುದ್ದಿ