This is a modal window.
Beginning of dialog window. Escape will cancel and close the window.
End of dialog window.
ಕಲಘಟಗಿ:ತಾಲೂಕಿನ ಬೇಡ್ತಿ ಹಾಗೂ ಶಾಲ್ಮಲಾ ನದಿಗಳ ಸಂಗಮ ಸ್ಥಾನದಲ್ಲಿ ಸ್ಥಾಪಿತವಾಗಿರುವ ಸುಕ್ಷೇತ್ರವಾದ ಸಂಗೇದೇವರಕೊಪ್ಪ ಗ್ರಾಮದ ಶ್ರೀ ಸಂಗಮೇಶ್ವರನ ಜಾತ್ರೆಯ ರಥೋತ್ಸವ ಭಕ್ತರ ಹರ್ಷೂದ್ಘಾರ ಹಾಗೂ ಮಂಗಲ ವಾಧ್ಯಗಳೊಂದಿಗೆ ಶುಕ್ರವಾರ ಸಂಜೆ ಜರುಗಿತು.
ಸಂಜೆ ದಾಸ್ತಿಕೊಪ್ಪ ಹನ್ನೆರಡು ಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯರ ಸ್ವಾಮಿಗಳ ಸಾನಿಧ್ಯದಲ್ಲಿ ರಥಕ್ಕೆ ಪೂಜೆ ನೇರವೇರಿಸಲಾಯಿತು.ನಂತರ ಮಂಗಲವಾದ್ಯಗಳೊಂದಿಗೆ ರಥದಲ್ಲಿ ಸಂಗಮೇಶ್ವರನ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ,ಭಕ್ತಿಯ ಹರ್ಷೋದ್ಗಾರದೊಂದಿಗೆ ರಥೋತ್ಸವವನ್ನು ನೆರವೇರಿಸಲಾಯಿತು.
Kshetra Samachara
15/01/2021 06:36 pm