ಕುಂದಗೋಳ : ಅಧಿಕ ಮಾಸದ ಅಮಾವಾಸ್ಯೆಯ ನಂತರದ ಸೋಮವಾರದ ದಿನವಾದ ಇಂದು ಕುಂದಗೋಳ ತಾಲೂಕಿನ ಹಳ್ಳಿಗರ ಮಹಿಳೆಯರು ಮನೆಯಲ್ಲಿ ಸೋಮವಾರದ ವ್ರತ ಕೈಗೊಂಡು ಮಣ್ಣಿನಲ್ಲಿ ಈಶ್ವರ ಮೂರ್ತಿ ಮಾಡಿ ನೂರೊಂದು ಬಿಲ್ವ ಪತ್ರೆದಳನ್ನ ಸಮರ್ಪಿಸಿ ಪೂಜೆ ನೆರವೇರಿಸಿದರು.
ಬಳಿಕ ಸೋಮವಾರ ವ್ರತದ ಶ್ಲೋಕಗಳನ್ನ ಪಠಿಸಿ ತಮ್ಮ ವಠಾರದ ಜನರನ್ನು ಸೇರಿಸಿ ಪ್ರಸಾದ ನೀಡಿದರು. ಮೂರು ವರ್ಷಕ್ಕೊಮ್ಮೆ ಬರುವ ಈ ಅಧಿಕ ಮಾಸದ ಅಮಾವಾಸ್ಯೆಯ ನಂತರದ ಮೊದಲ ಸೋಮವಾರದಿಂದ ಮತ್ತೆ ಮುಂದಿನ ಅಮಾವಾಸ್ಯೆಯ ಮೊದಲ ಸೋಮವಾರದ ವರೆಗೂ ಈ ಆಚರಣೆ ನೇರವೇಲ್ಪಡುತ್ತದೆ.
Kshetra Samachara
21/09/2020 10:45 pm