ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವೃದ್ಧಾಶ್ರಮದಲ್ಲಿ ತಾಯಂದಿರ ದಿನ ಆಚರಿಸಿದ ಯುವಕರು

ಹುಬ್ಬಳ್ಳಿ: ಇಂದು ವಿಶ್ವ ತಾಯಂದಿರ ದಿನ. ತಾಯಿ ಎಂದರೆ ದೇವರಗಿಂತ ಹೆಚ್ಚು. ಅದೆಷ್ಟೋ ಮಕ್ಕಳು ತಾಯಿಯಲ್ಲೇ ದೇವರನ್ನು ಕಂಡು ಯಶಸ್ಸಿನ ಜೀವನ ಕಂಡುಕೊಂಡಿದ್ದಾರೆ. ಆದರೆ ಕೆಲ ದುರಾದೃಷ್ಟ ಮಕ್ಕಳು ಹೆತ್ತ ತಾಯಿಯನ್ನು ದೂರ ಮಾಡಿ ಪಾಪ ಕಟ್ಟಿಕೊಳ್ಳುತ್ತಾರೆ. ಅಂತಹ ತಾಯಂದಿರಿಗೆ ಮಕ್ಕಳ ಕೊರತೆ ಕಾಡಬಾರದೆಂಬ ಕಾರಣಕ್ಕೆ ಇಂದು ಈ ಯುವಕರ ತಂಡ ವೃದ್ಧಾಶ್ರಮಕ್ಕೆ ಹೋಗಿ ವಿಶಿಷ್ಟವಾಗಿ ಮದರ್ಸ್ ಡೇ ಆಚರಿಸಿದ್ದಾರೆ.

ಹೀಗೆ ಸಾಲಾಗಿ ತಾಯಂದಿರನ್ನು ಕೂರಿಸಿ ಕಾಲು ತೊಳೆದು ಕುಂಕುಮ ಹಚ್ಚಿ ಪೂಜೆ ಮಾಡುತ್ತಿರುವ ಇವರು ಮಂಜುನಾಥ ಹೆಬಸೂರ ಗೆಳೆಯರ ಬಳಗದ ಯುವಕರು. ಹುಬ್ಬಳ್ಳಿಯ ನವನಗರದ ಮೈತ್ರಿ ಆಶ್ರಮಕ್ಕೆ ಹೋಗಿ ಅಲ್ಲೇ ವಾಸವಿದ್ದ ತಾಯಂದಿರ ಪಾದ ತೊಳೆದು ಅರಿಶಿಣ, ಕುಂಕುಮ ಹಚ್ಚಿ ಪಾದಗಳಿಗೆ ಹೂ ಏರಿಸಿ ಪೂಜೆ ಸಲ್ಲಿಸಿದ್ದಾರೆ. ನಂತರ ಕೇಕ್ ಕಟ್ ಮಾಡಿಸಿ ಸಿಹಿ ತಿನಿಸಿ ತಾಯಂದಿರ ಜೊತೆ ಡ್ಯಾನ್ಸ ಮಾಡಿಸುವ ಮೂಲಕ ಎಲ್ಲರ ಮುಖದಲ್ಲಿ ಸಂತಸ ಮೂಡಿಸುವುದರ ಮೂಲಕ ವಿಶ್ವ ತಾಯಂದಿರ ದಿನ ಆಚರಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

08/05/2022 07:46 pm

Cinque Terre

40.01 K

Cinque Terre

8

ಸಂಬಂಧಿತ ಸುದ್ದಿ