ಹುಬ್ಬಳ್ಳಿ- ಒಂದೆಡೆ ಗೌರಿ, ಇನ್ನೊಂದೆಡೆ ಗಂಗೆ, ಅರೆರೆ ಇನ್ನೊಂದೆಡೆ ಲಕ್ಷ್ಮಿ ಗಳನ್ನು ಮಹಿಳೆಯರಂತೆ ರೆಡಿ ಮಾಡುತ್ತಿರೋ ಪುರುಷರು, ಇನ್ನೊಂದೆಡೆ ರೆಡಿ ಆದ್ ಆಕಳುಗಳಿಗೆ ಪೂಜೆಯನ್ನು ಮಾಡಿ,ಹೂ ಮೂಡಿಸಿ, ಅವುಗಳಿಗೆ ಸೀರೆ ಉಡಿಸಿ, ಏನು ಬೇಕೋ ಅವುಗಳನ್ನು ತಿನ್ನಲು ಕೊಟ್ಟು ,ಸೋಬಾನ ಪದಗಳನ್ನು ಹಾಡುತ್ತಾ, ಆರತಿಯನ್ನು ಎತ್ತುತ್ತಿರೋ ಮಹಿಳೆಯರು ಅಷ್ಟಕ್ಕೂ ಇದೆಲ್ಲ ಏನು ಅಂತಿರಾ ಇಲ್ಲಿದೇ ನೋಡಿ......
ಪ್ರಧಾನಿ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ನಗರದ ಅಮರಗೋಳದಲ್ಲಿ 9 ಆಕಳಿಗೆ ಸೀಮಂತ ಮಾಡುವ ಮೂಲಕ ಮೋದಿ ಹುಟ್ಟು ಹಬ್ಬವನ್ನು ಡಿಫರೆಂಟ್ ಆಗಿ ಆಚರಣೆ ಮಾಡಿದ್ದಾರೆ....
ಇನ್ನು ಮಹಿಳೆಯರಿಗೆ ಗರ್ಭವತಿಯಾದಾಗ ಯಾವ ರೀತಿಯಾಗಿ ಸೀಮಂತ ಕಾರ್ಯವನ್ನು ಮಾಡುತ್ತಾರೋ, ಅದೇ ರೀತಿಯಾಗಿ ನಾವು ಕೂಡಾ ನಮ್ಮ ನಾಯಕರ ನೆನಪಿಗಾಗಿ ಈ ರೀತಿಯಾಗಿ ಆಕಳುಗಳಿಗೆ, ಮನುಷ್ಯರಿಗೆ ಯಾವ ರೀತಿಯಾಗಿ ಸಂಪ್ರದಾಯ ವಾಗಿ ಸೀಮಂತ ಕಾರ್ಯವನ್ನು ಮಾಡುತ್ತಾರೋ ಅದೇ ರೀತಿಯಾಗಿ ನಾವು ಕೂಡಾ ಮಾಡಿದ್ದೇವೆ ಅಂತಾರೆ ಈ ಅಮರಗೋಳದ ಈ ಮಹಿಳೆಯರು..
ಒಟ್ಟಿನಲ್ಲಿ ನಾಯಕರ ಹುಟ್ಟಿದ ಹಬ್ಬದ ಪ್ರಯುಕ್ತ ಬಾಯಿ ಇಲ್ಲದ ಮೂಕ ಪ್ರಾಣಿಗಳಿಗೆ,ಮನುಷ್ಯರ ರೀತಿಯಲ್ಲಿ ಈ ಸೀಮಂತ ಕಾರ್ಯ ಮಾತ್ರ ವಿಶೇಷವಾಗಿತ್ತು......!
Kshetra Samachara
19/09/2020 06:18 pm