ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ರಂಗಭೂಮಿ ಕಲಾವಿದರಿಗಾಗಿಯೇ ಧಾರವಾಡದಲ್ಲಿ ನಿರ್ಮಾಣವಾಗಿರುವ ರಂಗಾಯಣ, ನಿರ್ದೇಶಕರಾದ ರಮೇಶ ಪರವಿನಾಯ್ಕರ್ ಅವರ ನೇತೃತ್ವದಲ್ಲಿ ಮತ್ತೆ ರಂಗೇರುತ್ತಿದೆ.
ಈ ರಂಗಾಯಣದ ವ್ಯಾಪ್ತಿಗೆ ಏಳು ಜಿಲ್ಲೆಗಳು ಒಳಪಡುತ್ತವೆ. ಇದರ ನಿರ್ದೇಶಕರಾಗಿ ನೇಮಕಗೊಂಡಿರುವ ರಮೇಶ ಪರವಿನಾಯ್ಕರ್ ಅವರ ನೇತೃತ್ವದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುಪರ್ದಿಗೆ ಇದ್ದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನವನ್ನು ರಂಗಾಯಣದ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ. ಆ ಭವನವನ್ನು ಹೈಟೆಕ್ ಭವನವನ್ನಾಗಿ ನಿರ್ಮಾಣ ಮಾಡಲಾಗಿದೆ. ಇನ್ನು ರಂಗಾಯಣದ ಆವರಣದಲ್ಲಿ ವಿವಿಧ ನಾಟಕ ಪ್ರಸಂಗಗಳ ದೃಶ್ಯಗಳ ಸ್ಟ್ಯಾಚ್ಯೂಗಳನ್ನು ನಿರ್ಮಾಣ ಮಾಡಲಾಗಿದೆ.
ಒಂದು ಹೊಸ ಆರ್ಚ ಕೂಡ ನಿರ್ಮಾಣ ಮಾಡಲಾಗಿದ್ದು, ರಂಗಭೂಮಿ ಕಲಾವಿದರಿಗಾಗಲಿ ಹೊಸ ಹೊಸ ನಾಟಕ ಪ್ರಯೋಗಗಳನ್ನೂ ಕೈಗೆತ್ತಿಕೊಳ್ಳಲಾಗಿದೆ. ಏಳು ಜಿಲ್ಲೆಗಳ ರಂಗಭೂಮಿ ಕಲಾವಿದರನ್ನು ಪರಿಗಣನೆಗೆ ತೆಗೆದುಕೊಂಡು ಧಾರವಾಡ ರಂಗಾಯಣ ಇದೀಗ ಕಾರ್ಯ ಮಾಡುತ್ತಿದ್ದು, ರಂಗಭೂಮಿ ಕಲಾವಿದರಿಗೆ ಮತ್ತಷ್ಟು ಹುಮ್ಮಸ್ಸು ನೀಡಿದೆ.
ಉತ್ತಮ ನಿರ್ದೇಶಕರ ಇಚ್ಛಾಶಕ್ತಿಯಿಂದ ರಂಗಾಯಣ ಉತ್ತಮ ಕಾರ್ಯಕ್ಕೆ ಮುಂದಾಗಿದ್ದು, ಇನ್ನೂ ಅನೇಕ ರೀತಿಯ ಕೆಲಸಗಳನ್ನು ಕೈಗೆತ್ತಿಕೊಳ್ಳುವ ಉದ್ದೇಶಗಳನ್ನು ರಮೇಶ ಹೊಂದಿದ್ದಾರೆ. ಇಡೀ ರಂಗಾಯಣದ ಆವರಣ ಇದೀಗ ಪ್ರವಾಸಿ ತಾಣವಾದಂತಾಗಿದ್ದು, ರಂಗಭೂಮಿಯ ಕಂಪು ಹೊರ ಸೂಸುತ್ತಿದೆ.
Kshetra Samachara
30/11/2020 07:42 pm