ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಟಿ ಟ್ಯಾಲೆಂಟೆಡ್ ನಮ್ಮ ಹುಬ್ಬಳ್ಳಿಯ ಪುಟ್ಟ ಬಾಲಕಿ

ಪಬ್ಲಿಕ್ ನೆಕ್ಸ್ಟ್ ವಿಶೇಷ:ಈರಣ್ಣ ವಾಲಿಕಾರ

ಹುಬ್ಬಳ್ಳಿ: ಹೀಗೆ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಭಗತ್ ಸಿಂಗ್, ಬಸವಣ್ಣ, ಅವತ ವೇಷಭೂಷಣ ತೊಟ್ಟು, ಬ್ರಿಟಿಷರ ವಿರುದ್ಧ ರೋಷದಿಂದ ಡೈಲಾಗ್ ಹೇಳುತ್ತಿರುವ, ಈ ಪುಟ್ಟ ಬಾಲಕಿಯ ಹೆಸರು ಸೋಹನಿ ಮಾಗಣಗೇರಿ. ಹುಬ್ಬಳ್ಳಿಯ ನವನಗರದ ಶ್ರೀನಿವಾಸ ವೈಷ್ಣವಿ ದಂಪತಿಯ ಪ್ರೀತಿಯ ಪುತ್ರಿ.. ಶ್ರೀ ಸದುರ್ಗ ಚೆಸ್ ಮಾರ್ಟ್ಜ್ ಆ್ಯಂಡ್ ಮ್ಯೂಸಿಕ್ ಅಕಾಡೆಮಿ ವತಿಯಿಂದ, ಅಕ್ಟೋಬರ್ ತಿಂಗಳಲ್ಲಿ ಹಮ್ಮಿಕಂಡಿದ್ದ ನ್ಯಾಷನಲ್ ಲೇವಲ್ ಟ್ಯಾಲೆಂಟ್ ಶೋದಲ್ಲಿ ಸೋಹನಿ ಫಸ್ಟ್‌ ಪ್ರೈಜ್ ಪಡೆದುಕೊಂಡು, ಪಾಲಕರಿಗೆ ಖುಷಿ ತಂದು ಕೊಟ್ಟಿದ್ದಾಳೆ.....

ಐದು ವರ್ಷದ ಸೋಹನಿ ನಗರದ ಖಾಸಗಿ ಶಾಲೆ ಯೊಂದರಲ್ಲಿ ಯುಕೆಜಿ ಓದುತ್ತಿದ್ದಾಳೆ. ಇವಳು, ರಾಜ್ಯ ಮಟ್ಟ, ಮತ್ತು ಇಂಟರ್ ಸ್ಕೂಲ್ ದಲ್ಲಿ ಹಮ್ಮಿಕೊಂಡಿರುವ ಹಲವಾರು ಸ್ಪರ್ಧೆಯಲ್ಲಿ ಸೋಹನಿ ಫಸ್ಟ್ ಪ್ರೈಜ್ ಪಡೆದುಕೊಂಡು ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾಳೆ...

ಒಟ್ಟಿನಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಇಷ್ಟೋಂದು ಪ್ರಶಸ್ತಿ ಪಡೆಯುತ್ತಿರು ಸೋಹನಿ, ಆಕಾಶದೆತ್ತರ ಬೆಳೆಯಬೇಕು ಎನ್ನುವುದು ಎಲ್ಲರ ಆಶಯ.......!

Edited By : Manjunath H D
Kshetra Samachara

Kshetra Samachara

04/11/2020 06:15 pm

Cinque Terre

64.63 K

Cinque Terre

9

ಸಂಬಂಧಿತ ಸುದ್ದಿ