ಧಾರವಾಡ: ಯಾವುದೇ ಕ್ಷೇತ್ರದಲ್ಲಿ ನಾವು ಯಶಸ್ಸನ್ನು ಹೊಂದಬೇಕಾದರೆ ಜೀವನದಲ್ಲಿ ಮೊದಲು ಶಿಸ್ತನ್ನು ಅಳವಡಿಸಿಕೊಳ್ಳಬೇಕೆಂದು ಕ್ಲಾಸಿಕ್ ಸಮೂಹ ಸಂಸ್ಥೆಗಳ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನಿರ್ದೇಶಕ, ಲಕ್ಷ್ಮಣ ಎಸ್. ಉಪ್ಪಾರ ಹೇಳಿದರು.
ಕ್ಲಾಸಿಕ್ ಕೆಎಎಸ್/ಐಎಎಸ್ ಸ್ಟಡಿ ಸರ್ಕಲ್‍ನಲ್ಲಿ ನಡೆದ (ಇಂಜಿನಿಯರ್ಸ್ ಡೇ) ಅಭಿಯಂತರರ ದಿನಾಚರಣೆಯಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಮಾಣಿಕತೆ ಮತ್ತು ಕಠಿಣ ನಿಲುವುಗಳಿಂದ ಶಾಶ್ವತ ಕಾರ್ಯಗಳಾಗಲು ಸಾಧ್ಯವೆಂದ ಅವರು, ಈ ನಿಟ್ಟಿನಲ್ಲಿ ವಿಶ್ವೇಶ್ವರಯ್ಯನವರು ಎಲ್ಲರಿಗೂ ಮಾದರಿಯಾಗಿದ್ದಾರೆಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ ಮಡಿವಾಳರ, ರವಿ ನಾಯ್ಕರ, ಮುಖ್ಯ ವ್ಯವಸ್ಥಾಪಕಿ ಸುಜಾತಾ.ಪಿ. ಅತಿಥಿಗಳಾಗಿದ್ದರು. ಕಾರ್ಯಕ್ರಮದಲ್ಲಿ ಇಂಜಿನೀಯರಿಂಗ್ ಪದವಿ ಪಡೆದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಸಂಯೋಜಕರಾದ ದೀಪಕ ಜೋಡಂಗಿ ಸ್ವಾಗತಿಸಿದರು, ಬಸವರಾಜ ಕುಪ್ಪಸಗೌಡ್ರ ನಿರೂಪಿಸಿ ವಂದಿಸಿದರು.
Kshetra Samachara
17/09/2022 10:07 pm