ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಜಿನ್ನೂರ ಗ್ರಾಮದಲ್ಲಿ "ಕಾವ್ಯಚಿಗುರು '' ಕಾರ್ಯಾಗಾರ

ಕಲಘಟಗಿ:ಮನಸ್ಸಿನ ಭಾವನೆಗಳನ್ನು ಅಭಿವ್ಯಕ್ತಿಗೊಳಿಸಲು ಕಾವ್ಯ ರಚನೆ ಉತ್ತಮ ಮಾಧ್ಯಮವಾಗಿದ್ದು, ಮಕ್ಕಳ ಮನಸ್ಸನ್ನು ಅರಳಿಸುವ ಅಂತಃಶಕ್ತಿ ಕಾವ್ಯಕ್ಕಿದೆ ಎಂದು ಧಾರವಾಡ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಹಾಗೂ ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ ಅಭಿಪ್ರಾಯಪಟ್ಟರು.

ಅವರು ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದ ಸರಕಾರಿ ಪ್ರೌಢಶಾಲೆ ಯಲ್ಲಿ ಸುನಿಧಿ ಕಲಾ ಸೌರಭ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದ್ದ, ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಲು ಪ್ರೇರೇಪಿಸುವ ಹಾಗೂ ಕವನಗಳನ್ನು ರಚಿಸುವ "ಕಾವ್ಯಚಿಗುರು" ಕಾರ್ಯಾಗಾರವನ್ನು ಉದ್ಘಾಟಿಸಿ‌ ಮಾತನಾಡಿ,ಕಾರ್ಯಗಾರ ನಡೆಸಿ ಮಕ್ಕಳಿಗೆ ಕಾವ್ಯ ರಚನೆಯನ್ನು ಮಾಡುವ ಕುರಿತು ಮನಮುಟ್ಟುವಂತೆ ತಿಳಿಸಿದರು.

ಎಸ್ಡಿಎಂಸಿ ಅಧ್ಯಕ್ಷ ಶಿವನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.ಕಲಘಟಗಿ ಕಸಾಪ ಮಾಜಿ ಅಧ್ಯಕ್ಷ ಎಂ.ಎಂ ಪುರದನಗೌಡರ,ಸಾಹಿತಿ ವೈ.ಜಿ ಭಗವತಿ,ಸಂಸ್ಥೆ ಅಧ್ಯಕ್ಷ ಸುಭಾಸ ನರೇಂದ್ರ,ಕಾರ್ಯದರ್ಶಿ ಶ್ರೀಮತಿ ವೀಣಾ ಅಠವಲೆ,ಮೇನಕಾ‌ ಮಠದ,ಎಸ್ ಪಿ ಕುಂದರಗಿ,ಸುರೇಶ ಕಳಸಣ್ಣವರ,ಗೋಪಾಲಕೃಷ್ಣ ಭಾಗವರ,ಜಿ‌ ಎಂ ರೊಟ್ಟಿ,ದೀಲಿಪಕುಮಾ,ಶಕುಂತಲಾ ಮಡಿವಾಳರ,ಮಹತಾಬ ಫಿರಜಾದೆ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

08/02/2021 08:46 pm

Cinque Terre

20.26 K

Cinque Terre

0

ಸಂಬಂಧಿತ ಸುದ್ದಿ