ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದ ಮರಾಠಾ ವಿದ್ಯಾಪ್ರಸಾರಕ ಮಂಡಳ

ಧಾರವಾಡ: ಧಾರವಾಡದಲ್ಲಿ ಸುಮಾರು 127 ವರ್ಷಗಳಿಂದ ಮರಾಠಾ ವಿದ್ಯಾಪ್ರಸಾರಕ ಮಂಡಳವು ಕಾರ್ಯನಿರ್ವಹಿಸುತ್ತಿದ್ದು, ಹೆಸರಿನಂತೆಯೇ ವಿದ್ಯೆ ನೀಡುವ ಮೂಲ ಉದ್ದೇಶ ಹೊಂದಿದೆ ಎಂದು ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಧಾರವಾಡದ ಮರಾಠಾ ವಿದ್ಯಾಪ್ರಸಾರಕ ಮಂಡಳದ ನೂತನ ಪದವಿ ಕಾಲೇಜಿನ ಕಟ್ಟಡ ಮತ್ತು ವಾಣಿಜ್ಯ ಮಳಿಗೆಯ ಶಂಕು ಸ್ಥಾಪನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಮರಾಠಾ ವಿದ್ಯಾಪ್ರಸಾರಕ ಮಂಡಳವು ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಿದೆ. ಶಿಕ್ಷಣದಿಂದಲೇ ಒಂದು ಸಮಾಜದ ಪ್ರಗತಿ ಸಾಧ್ಯವಾಗುತ್ತದೆ ಎಂಬುದನ್ನು ಮರಾಠಾ ಸಮಾಜ ತೋರಿಸಿಕೊಟ್ಟಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮರಾಠಾ ವಿದ್ಯಾಪ್ರಸಾರಕ ಮಂಡಳದ ಅಧ್ಯಕ್ಷ ಎಂ.ಎನ್.ಮೋರೆ ಮಾತನಾಡಿ, ಸಂಸ್ಥೆಯು ಮುಂಬರುವ ದಿನಗಳಲ್ಲಿ ಬಿಎಸ್ಸಿ, ಐಟಿಐ, ಪಿಜಿ, ವೃತ್ತಿಪರ ಕೋರ್ಸ್, ಗ್ರಂಥಾಲಯ, ಆಟದ ಮೈದಾನ, ತುಳುಜಾಭವಾನಿ ದೇವಸ್ಥಾನದ ಜೀರ್ಣೋದ್ಧಾರ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಮಾಡುವ ಉದ್ದೇಶ ಹೊಂದಿದೆ ಎಂದರು.

ರಾಜು ಬಿರಜಣ್ಣವರ, ದತ್ತಾತ್ರೇಯ ಮೋಟೆ, ಎಸ್.ಎಂ.ಸಂಕೋಜಿ, ಯಲ್ಲಪ್ಪ ಚೌಹಾಣ, ಸುಭಾಸ ಶಿಂಧೆ, ಶಿವಾಜಿ ಸೂರ್ಯವಂಶಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Edited By : Nagaraj Tulugeri
Kshetra Samachara

Kshetra Samachara

25/01/2021 11:27 pm

Cinque Terre

10.65 K

Cinque Terre

1

ಸಂಬಂಧಿತ ಸುದ್ದಿ