ಧಾರವಾಡ: ಧಾರವಾಡ ರಂಗಾಯಣಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಭೇಟಿ ನೀಡಿ ರಂಗಾಯಣ ಆವರಣದ ವಿವಿಧ ಸ್ಥಳಗಳನ್ನು ವೀಕ್ಷಿಸಿ ಪರಿಶೀಲಿಸಿದರು.
ರಂಗಾಯಣದ ಕೊಠಡಿ, ಬಯಲು ರಂಗಮಂದಿರ, ಸಮುಚ್ಚಯ ಭವನ, ರಂಗಭೂಮಿ ಕಲಾವಿದರ ಜೀವನ ಚರಿತ್ರೆಯ ಪರಿಚಯ ಕೊಠಡಿ
ಸಭಾಂಗಣ, ಗ್ರಂಥಾಲಯವನ್ನು ವೀಕ್ಷಣೆ ಮಾಡಿದರು.
ರಂಗಭೂಮಿ ಕಲಾವಿದರ ಕೃತಿಗಳ ಕೊಠಡಿ ಸೇರಿದಂತೆ ಇತರ ಸ್ಥಳಗಳನ್ನು ಆಸಕ್ತಿಯಿಂದ ವೀಕ್ಷಿಸಿದರು.
ಈ ಸಂದರ್ಭದಲ್ಲಿ ರಂಗಾಯಣದ ಅಧಿಕಾರಿಗಳು, ಸಿಬ್ಬಂದಿ ವಿವಿಧ ಸ್ಥಳಗಳ ಕುರಿತು ಮಾಹಿತಿ ನೀಡಿದರು.
ಉಪವಿಭಾಗಾಧಿಕಾರಿ ಡಾ. ಬಿ.ಗೋಪಾಲಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಇದ್ದರು.
Kshetra Samachara
28/09/2020 05:06 pm