ಹುಬ್ಬಳ್ಳಿ: ವೀರ ರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಅಂಗವಾಗಿ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿರುವ ಪುತ್ಥಳಿಕೆಗೆ ಹರಿಹರದ ವಚನಾನಂದ ಸ್ವಾಮೀಜಿ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು,ಕಿತ್ತೂರಿನ ರಾಣಿ ಚೆನ್ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಅಗ್ರಗಣ್ಯ ಸ್ಥಾನವನ್ನು ಪಡೆದಿರುವ ಮಹಿಳೆಯಾಗಿದ್ದಾರೆ.ಅವರ ಸೇವೆ ನಿಜಕ್ಕೂ ಚಿರಸ್ಥಾಯಿಯಾಗಿದೆ ಎಂದರು.
ಪಂಚಮಸಾಲಿ ಸಮುದಾಯವನ್ನು 2A ಗೆ ಸೇರ್ಪಡೆ ಮಾಡುವಂತ ಹೋರಾಟ ಸುಮಾರು ಇಪ್ಪತ್ತೈದು ವರ್ಷದ ಹೋರಾಟವಾಗಿದೆ.2009ರ ವರೆಗೆ ಪಂಚಮಸಾಲಿ ಯಾವುದೇ ಜಾತಿ ಪಟ್ಟಿಯಲ್ಲಿ ಇರಲಿಲ್ಲ.ಕೃಷಿಯನ್ನು ಪ್ರಮುಖವಾದ ಜೀವನೋಪಾಯದ ಉದ್ಯೋಗವಾಗಿಸಿಕೊಂಡಿದ್ದ ಒಂದು ಸಮುದಾಯವಾಗಿದೆ.ಈ ಪಂಚಮಸಾಲಿ ಸಮುದಾಯವನ್ನು 2Aಗೆ ಸೇರಿಸಲು ನಾವು ಹೋರಾಟ ನಡೆಸುತ್ತೇವೆ ಇದಕ್ಕೆ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಕೂಡ ಹೋರಾಟ ಮಾಡುತ್ತಿದ್ದಾರೆ ಅವರಿಗೂ ಕೂಡ ನಾವು ಬೆಂಬಲ ಸೂಚಿಸುತ್ತೇವೆ ಎಂದರು.
ಪಂಚಮಸಾಲಿ ಸಮುದಾಯಕ್ಕೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂಬುವ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಯಾರ ಕಿವಿಗೆ ಮುಟ್ಟಿಸಬೇಕೋ ಅವರಿಗೆ ಮುಟ್ಟಿಸಿದ್ದೇವೆ.ಅವರು ನ್ಯಾಯಕೊಡುವ ಎಲ್ಲ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು
Kshetra Samachara
23/10/2020 01:15 pm