ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪೊಲೀಸರ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಖದೀಮರು: ಮುಂದಾಗಿದ್ದೇ ಬೇರೆ

ಧಾರವಾಡ: ಇಬ್ಬರು ಕಳ್ಳರು ಕಳ್ಳತನ ಮಾಡಲೆಂದು ಪೊಲೀಸರೊಬ್ಬರ ಮನೆಗೆ ನುಗ್ಗಲು ಯತ್ನಿಸಿ ಕೊನೆಗೆ ಪೊಲೀಸರ ಅತಿಥಿಯಾದ ಘಟನೆ ಧಾರವಾಡದ ಸಾಧುನವರ ಎಸ್ಟೇಟ್‌ನಲ್ಲಿ ನಡೆದಿದೆ.

ಧಾರವಾಡದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿ ಕೆಲಸ ಮಾಡುತ್ತಿರುವ ಬಸವರಾಜ ಬಳಿಗೇರ ಎಂಬುವವರ ಮನೆಗೆ ಕಳ್ಳರು ನಿನ್ನೆ ರಾತ್ರಿ ನುಗ್ಗಲು ಯತ್ನಿಸಿದರು. ಬಳಿಗೇರ ಅವರ ಮನೆ ಸಾಧುನವರ ಎಸ್ಟೇಟ್‌ನ ಬೆಟಗೇರಿ ಬಿಲ್ಡಿಂಗ್‌ನಲ್ಲಿದ್ದು, ಅವರ ಮನೆಗೆ ಇಬ್ಬರು ಕಳ್ಳರು ರಾತ್ರೋರಾತ್ರಿ ನುಗ್ಗಲು ಹೊಂಚು ಹಾಕಿಕೊಂಡು ಕುಳಿತುಕೊಂಡಿದ್ದರು.

ಕಳ್ಳರ ಸಪ್ಪಳ ಕೇಳಿದ ಬಳಿಗೇರ ಹಾಗೂ ಅವರ ಪುತ್ರ, ಮೊದಲು ಮನೆಯ ಬಾಗಿಲು ತೆರೆದು ನೋಡಿದ್ದಾರೆ. ಆಗ ಯಾರೂ ಅವರ ಕಣ್ಣಿಗೆ ಕಾಣಿಸಿಕೊಂಡಿಲ್ಲ. ನಂತರ ಎರಡನೇ ಬಾರಿಗೂ ಕಳ್ಳರು ಪಿಸುಗುಡುತ್ತಿದುದನ್ನು ಕೇಳಿದ ಮನೆಯವರು ಮೊದಲ ಓರ್ವ ಕಳ್ಳನನ್ನು ಹಿಡಿದಿದ್ದಾರೆ. ಆನಂತರ 112ಗೆ ಕರೆ ಮಾಡಿದ ಬಳಿಗೇರ ಅವರು ಪೊಲೀಸರ ಸಹಾಯದಿಂದ ಮತ್ತೋರ್ವ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಇಬ್ಬರೂ ಕಳ್ಳರನ್ನು ಹಿಡಿಯುವಾಗ ಒಬ್ಬ ಕಳ್ಳ ಎಎಸ್‌ಐ ಬಳಿಗೇರ ಅವರ ಮೂಗಿಗೆ ಪರಚಿದ್ದಾನೆ. ವಾಸು ಮಾದರ ಹಾಗೂ ಮೃತ್ಯುಂಜಯ ಮರೆಪ್ಪನವರ ಎಂಬುವವರೇ ಬಂಧಿತ ಕಳ್ಳರಾಗಿದ್ದು, ಈ ಇಬ್ಬರೂ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದವರು ಎಂದು ತಿಳಿದು ಬಂದಿದೆ. ಸದ್ಯ ಇಬ್ಬರನ್ನೂ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Edited By : Nagaraj Tulugeri
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/10/2022 06:33 pm

Cinque Terre

112.21 K

Cinque Terre

1

ಸಂಬಂಧಿತ ಸುದ್ದಿ