ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪುಷ್ಪಾ ಶವ ಪಡೆಯಲು ಪಟದಾರಿ : ಶವಾಗಾರದ ಮುಂದೆ ಬಂದೋಬಸ್ತ್

ಹುಬ್ಬಳ್ಳಿ: ಪುಷ್ಪಾ ಪಟದಾರಿ ಶವವನ್ನು ಪಡೆಯಲು ಕಿಮ್ಸ್ ಶವಾಗಾರದ ಮುಂದೆ ಉಭಯ ಕುಟುಂಬದವರ ನಡುವೆ ಗೊಂದಲ ಏರ್ಪಟ್ಟ ಹಿನ್ನೆಲೆಯಲ್ಲಿ,ಶವಾಗಾರದ ಮುಂದೆ ಪೊಲೀಸರು ಸೂಕ್ತ ಬಂದೋಬಸ್ತ್ ಮಾಡಿದ್ದಾರೆ.

ಶವಾಗಾರದ ಮುಂದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಈ ವ್ಯವಸ್ಥೆ ಮಾಡಲಾಗಿದೆ. ಪುಷ್ಪಾಳ ಶವ ನಮಗೆ ನೀಡಿ ಎಂದು ಪಟದಾರಿ ಕುಟುಂಬದವರು ಕೇಳುತ್ತಿದ್ದಾರೆ. ನಾವು ಮರಾಠಾ ಸಂಪ್ರದಾಯದ ಪ್ರಕಾರ ಅಂತ್ಯಸಂಸ್ಕಾರ ಮಾಡುತ್ತೇವೆ ಎನ್ನುತ್ತಿದ್ದಾರೆ.

ಅತ್ತ ಪುಷ್ಪಾ ತವರು ಮನೆಯವರು ಮಗಳ ಶವವನ್ನು ನಮಗೆ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಸದ್ಯ ೆರಡು ಕುಟುಂಬಗಳ ಮಧ್ಯೆ ಶವ ಯಾರ ಪಾಲಾಗತ್ತೆ ಎನ್ನುವುದು ಇನ್ನು ಅಂತಿಮವಾಗಿಲ್ಲ. ಇದರ ಮಧ್ಯೆ ಶವಾಗಾರದ ಮುಂದೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಸ್ಥಳದಲ್ಲೇ ಇಬ್ಬರು ಎಸಿಪಿ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಬಿಡು ಬಿಟ್ಟಿದ್ದು,ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಂಡು ಬಂದೋಬಸ್ತ ಮಾಡಲಾಗಿದೆ.

Edited By : Shivu K
Kshetra Samachara

Kshetra Samachara

29/09/2022 01:14 pm

Cinque Terre

49.89 K

Cinque Terre

0

ಸಂಬಂಧಿತ ಸುದ್ದಿ