ಧಾರವಾಡ: ವಿಚಾರಣೆಗೆಂದು ಧಾರವಾಡ ಕೋರ್ಟ್‌ಗೆ ಕರೆತರಲಾಗಿದ್ದ ಭೂಗತ ಪಾತಕಿ ಬಚ್ಚಾಖಾನ್‌ಗೆ ಆತನ ಪ್ರಿಯತಮೆಯೊಂದಿಗೆ ಸರಸ ಸಲ್ಲಾಪ ಮಾಡಲು ಸಹಕಾರ ನೀಡಿದ ಪೊಲೀಸರನ್ನು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಬಚ್ಚಾಖಾನ್ ಲಾಡ್ಜ್‌ಗೆ ಸರಸ ಸಲ್ಲಾಪಕ್ಕೆ ಹೋಗಿದ್ದ ಇದಕ್ಕೆ ಪೊಲೀಸರೂ ಸಹಕಾರ ಕೊಟ್ಟಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಆದರೆ, ಬಚ್ಚಾಖಾನ್ ವಾಷ್ ರೂಮ್‌ಗೆ ಹೋಗಿ ಬರುವುದಾಗಿ ಹೇಳಿ ತಪ್ಪಿಸಲು ಯತ್ನಿಸಿದ್ದ. ಆತನನ್ನು ಹಿಡಿಯಲು ಹೋದಾಗ ಆತನ ಕಡೆಯವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು ಎಂದು ಧಾರವಾಡದ ವಿದ್ಯಾಗಿರಿ ಠಾಣೆಯಲ್ಲಿ ಇದೀಗ ದೂರು ದಾಖಲಾಗಿದೆ.
ಬಚ್ಚಾಖಾನ್ ಸೇರಿದಂತೆ ಆತನಿಗೆ ಸಹಾಯ ಮಾಡಿದ ಮೈನುದ್ದೀನ್ ಪಟೇಲ್, ಮಹ್ಮದ್ ಯುನೂಸ್, ಫಜಲ್ ಕುಂದಗೋಳ ಎಂಬುವವರ ಮೇಲೂ ದೂರು ದಾಖಲಾಗಿದೆ.
ಆದರೆ, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಬಳ್ಳಾರಿಯ ಪೊಲೀಸರಾದ ಕಾನ್‌ಸ್ಟೇಬಲ್‌ಗಳಾದ ಯೋಗೇಶಾಚಾರ, ಎಸ್.ಶಶಿಕುಮಾರ, ರವಿಕುಮಾರ ಮತ್ತು ಸಂಗಮೇಶ ಎನ್ನುವವರನ್ನು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/08/2022 05:54 pm