ಧಾರವಾಡ: ಧಾರವಾಡದ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಂದ ಡಬಲ್ ಹಣ ವಸೂಲಿ ಮಾಡುತ್ತಿದ್ದ ಆರು ಆಟೋಗಳು ಸಂಚಾರ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.
ಆಟೋ ಚಾಲಕರು ಡಬಲ್ ಮೀಟರ್ ಹಾಕಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸರೇ ಮಾರು ವೇಷದಲ್ಲಿ ಹೋಗಿ ಆಟೋಗಳನ್ನು ಜಪ್ತಿ ಮಾಡಿದ್ದಾರೆ.
ಮಾರು ವೇಷದಲ್ಲಿ ಪ್ರಯಾಣಿಕರಂತೆ ರೈಲು ನಿಲ್ದಾಣಕ್ಕೆ ಹೋದ ಪೊಲೀಸರು, ಯಾವ ಆಟೋ ಚಾಲಕರು ಡಬಲ್ ಹಣ ವಸೂಲಿ ಮಾಡುತ್ತಿದ್ದರೋ ಅಂತವರನ್ನು ಪತ್ತೆ ಮಾಡಿ ಅವರ ಆಟೋಗಳನ್ನು ವಶಕ್ಕೆ ಪಡೆದಿದ್ದಾರೆ.
Kshetra Samachara
17/08/2022 03:41 pm