ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ತಾರಿಹಾಳ ಅಗ್ನಿ ದುರಂತ ಕೇಸ್‌; ಫ್ಯಾಕ್ಟರಿ ಮಾಲೀಕ ಅರೆಸ್ಟ್

ಹುಬ್ಬಳ್ಳಿ: ತಾರಿಹಾಳದಲ್ಲಿ ಇತ್ತೀಚೆಗೆ ನಡೆದಿದ್ದ ಅಗ್ನಿ ದುರಂತ ಪ್ರಕರಣದಲ್ಲಿ ಕಾರ್ಖಾನೆಯ ಮಾಲೀಕರನನ್ನು ಬಂಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೊಕೇಶ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.

ಈಗಾಗಲೇ ತಾರಿಹಾಳದಲ್ಲಿ ಕಂಪನಿಯ ಮೇಲ್ವಿಚಾರಣೆ ನಡೆಸುತ್ತಿದ್ದ ಮ್ಯಾನೇಜರ್‌ನನ್ನು ಬಂಧನ ಮಾಡಲಾಗಿತ್ತು. ಇದೀಗ ಕಂಪನಿಯ ಓರ್ವ ಮಾಲೀಕನನ್ನು ಇಂದು ಬಂಧನ ಮಾಡಲಾಗಿದೆ. ಇವರ ಕಂಪನಿಗೆ ಸ್ಫೋಟಕ ಸಾಮಗ್ರಿಗಳನ್ನು ವಿತರಣೆ ಮಾಡುತ್ತಿದ್ದವರು ಯಾರು.? ಹೇಗೆ ವಿತರಣೆ ಮಾಡುತ್ತಿದ್ದರು. ಇದಕ್ಕೆ ಪರವಾನಿಗೆ ಪಡೆದಿದ್ದರೋ ಇಲ್ಲವೋ ಎಂಬುದನ್ನು ಮಾಲೀಕನಿಂದ ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ ಎಂದು ಮಾಧ್ಯಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಪ್ರತಿಕ್ರಿಯೆ ನೀಡಿದರು.

Edited By : Shivu K
Kshetra Samachara

Kshetra Samachara

01/08/2022 07:56 pm

Cinque Terre

35.43 K

Cinque Terre

1

ಸಂಬಂಧಿತ ಸುದ್ದಿ