ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ವಾಹನದ ಟಾಪ್ ಏರಿ ಪ್ರಯಾಣ, ಪೊಲೀಸರಿಂದ ಬಿತ್ತು ದಂಡ!

ಕುಂದಗೋಳ: ವಾಹನದ ಟಾಪ್ ಏರಿ ಪ್ರಯಾಣ ಬೆಳೆಸುತ್ತಿದ್ದ ಪ್ರಯಾಣಿಕರು ಹಾಗೂ ವಾಹನ ಚಲಾಯಿಸುತ್ತಿದ್ದ ಸವಾರನಿಗೆ ಬುದ್ಧಿ ಹೇಳಿದ ಪೊಲೀಸ್ ಅಧಿಕಾರಿಗಳು ದಂಡ ವಿಧಿಸಿದ್ದಾರೆ.

ಹೌದು ! ಕುಂದಗೋಳ ಪಟ್ಟಣದಿಂದ ಹಳ್ಳಿಗಳಿಗೆ ಹೊರಟು ಖಾಸಗಿ ವಾಹನಗಳು ಆಸನದ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ವಾಹನದಲ್ಲಿ ತುಂಬಿ ವಾಹನದ ಟಾಪ್ ಮೇಲೆ ಜನರನ್ನು ಕೂರಿಸಿದ್ದರು.

ಇದನ್ನು ಗಮನಿಸಿದ ಕುಂದಗೋಳ ಗ್ರಾಮೀಣ ಪೊಲೀಸ್ ಅಧಿಕಾರಿಗಳು ವಾಹನ ಸವಾರ ಹಾಗೂ ಪ್ರಯಾಣಿಕರಿಬ್ಬರಿಗೂ ದಂಡ ವಿಧಿಸಿ ತಿಳುವಳಿಕೆ ನೀಡಿದ್ದಾರೆ.

ಅದರಂತೆ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯಲ್ಲಿ ಈ ತರಹ ನಿಯಮ ಮೀರುವ ವಾಹನ ಸವಾರರಿಗೆ ಖಡಕ್ ಎಚ್ಚರಿಕೆ ಜೊತೆ ದಂಡದ ಬಿಸಿ ನೀಡುತ್ತಿದ್ದಾರೆ.

ಹೀಗಿದ್ದರೂ ಸಹ ಜನ ಖಾಸಗಿ ವಾಹನ ಬೈಕ್ ಸವಾರರು ಪೊಲೀಸರನ್ನು ಮರೆಮಾಚಿ ಓಡುವ ದೃಶ್ಯಗಳು ಸಹ ಕಂಡು ಬಂದವು.

Edited By : PublicNext Desk
Kshetra Samachara

Kshetra Samachara

30/07/2022 01:32 pm

Cinque Terre

27.14 K

Cinque Terre

2

ಸಂಬಂಧಿತ ಸುದ್ದಿ