ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೆಮಿಕಲ್ ಡಬ್ಬಿ ಸ್ಫೋಟಗೊಂಡು ಕಾರ್ಮಿಕನಿಗೆ ಗಾಯ.!

ಹುಬ್ಬಳ್ಳಿ: ಪ್ಲೈವುಡ್ ಬಾಗಿಲು ತಯಾರಿಸುವ ವೇಳೆ ಕೆಮಿಕಲ್ ಡಬ್ಬಿ ಸ್ಫೋಟಗೊಂಡು ಕಾರ್ಮಿಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿದ್ಯಾನಗರ ಟಿಂಬರ್ ಯಾರ್ಡ್‌ನಲ್ಲಿ ಸಂಭವಿಸಿದೆ.

ಪಶ್ಚಿಮ ಬಂಗಾಳ ಮೂಲದ ಸೋಬೆನ್ ಚಂದ್ರ ಬರ್ಮನ್ (42) ಗಾಯಗೊಂಡ ಕಾರ್ಮಿಕ. ಪ್ರಕಾಶ ಪ್ಲೈವುಡ್ ಫ್ಯಾಕ್ಟರಿಯಲ್ಲಿ ಸೋಬೆನ್ ಕೆಲಸ ಮಾಡುತ್ತಿದ್ದ. ಡೋರ್ ಸಿದ್ಧಪಡಿಸಲು ಕೆಮಿಕಲ್ ಡಬ್ಬಿ ತೆರೆದಾಗ ಸ್ಫೋಟಗೊಂಡಿದೆ. ಗಾಯಗೊಂಡಿದ್ದ ಸೋಬೆನ್‌ನನ್ನು ಕಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸ್ಫೋಟದ ಶಬ್ದವು ಸುತ್ತಮುತ್ತಿಲಿನ ಜನರನ್ನು ಬೆಚ್ಚಿಬೀಳುವಂತೆ ಮಾಡಿತ್ತು. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagesh Gaonkar
Kshetra Samachara

Kshetra Samachara

21/07/2022 03:58 pm

Cinque Terre

41.61 K

Cinque Terre

0

ಸಂಬಂಧಿತ ಸುದ್ದಿ