ಧಾರವಾಡ: ಧಾರವಾಡದಲ್ಲಿ ಒಂಬತ್ತು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರು ಕಳ್ಳರ ಹೆಡೆಮುರಿ ಕಟ್ಟುವಲ್ಲಿ ಧಾರವಾಡ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಧಾರವಾಡ ಜಕಣಿಭಾವಿಯ ಅಭಿಷೇಕ ಅಂಜನೇಯ ಅಬ್ಬೂರ, ಗೌಳಿಗಲ್ಲಿಯ ಅಕ್ಷಯ ಕಿಶೋರ ಪುಲಸಂಗೆ, ಭೂಸಪ್ಪ ಚೌಕನ ಹಣ್ಣಿನ ವ್ಯಾಪಾರಿ ಹಾಜಿಭಾಷಾ ಮಹ್ಮದ್ ರಫೀಕ್ ಯಲ್ಲಾನೂರ ಹಾಗೂ ಭೂಸಪ್ಪ ಚೌಕ್‌ನ ಹೊಟೇಲ್‌ನಲ್ಲಿನ ಕೆಲಸಗಾರ ಸೈಯದ್ ಸೋಹೇಲ್ ಊರ್ಫ್ ಸೈಯದ್ ಜಾಕೀರ್ ಬಾನದಾರ ಎಂಬುವವರೇ ಬಂಧಿತ ಆರೋಪಿಗಳು.
ಬಂಧಿತರಿಂದ 105 ಗ್ರಾಂ ಚಿನ್ನ, 732 ಗ್ರಾಂ ಬೆಳ್ಳಿ ಹಾಗೂ ಸ್ಕೂಟಿ ಸೇರಿದಂತೆ ಅಂದಾಜು 4,91,600 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
Kshetra Samachara
14/07/2022 09:07 pm