ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಿದ್ಯುತ್ ಬಿಲ್ ಹೆಸರಲ್ಲಿ ವಂಚನೆ:ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು!

ಹುಬ್ಬಳ್ಳಿ: 'ರಾತ್ರಿಯೊಳಗೆ ಹೆಸ್ಕಾಂ ಬಿಲ್ ಅಪ್ಡೇಟ್ ಮಾಡದಿದ್ದರೆ ಇಂದು ರಾತ್ರಿ ನಿಮ್ಮ ಮನೆಯ ವಿದ್ಯುತ್ ಕಡಿತಗೊಳ್ಳಲಿದೆ' ಎಂದು ನಗರದ ವ್ಯಕ್ತಿಯೊಬ್ಬರಿಗೆ ಸಂದೇಶ ಕಳುಹಿಸಿ, ಆ್ಯಪ್‌ವೊಂದನ್ನು ಡೌನ್‌ಲೋಡ್ ಮಾಡಿಸಿ 99,907 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ಕುಸುಗಲ್ ರಸ್ತೆಯ ಭಾಸ್ಕರರಾವ್ ಎಂಬುವರಿಗೆ ಅಪರಿಚಿತರು ಸಂದೇಶ ಕಳುಹಿಸಿದ್ದರು. ನಿಮ್ಮ ಹಿಂದಿನ ತಿಂಗಳ ಬಿಲ್ ಅಪ್ಡೇಟ್ ಆಗಿಲ್ಲ. ರಾತ್ರಿಯೊಳಗೆ ಅಪ್ಲೇಟ್ ಮಾಡದಿದ್ದರೆ ವಿದ್ಯುತ್‌ ಕಡಿತವಾಗಲಿದೆ. ಹಾಗಾಗಿ, ಈ ಕೂಡಲೆ ನಮ್ಮ ಅಧಿಕಾರಿಯನ್ನು ಸಂಪರ್ಕಿಸಿ' ಎಂದು ಸಂಪರ್ಕ ಸಂಖ್ಯೆಯೊಂದನ್ನು ರವಾನಿಸಿದ್ದರು. ಇದನ್ನು ನಂಬಿದ ಭಾಸ್ಕರರಾವ್‌ ಆ ನಂಬರ್‌ಗೆ ಕರೆ ಮಾಡಿದ್ದರು.

ಅಧಿಕಾರಿ ಸೋಗಿನಲ್ಲಿ ಮಾತನಾಡಿದ ಅಪರಿಚಿತ “ಟೀಮ್ ವೀವರ್ ಕ್ವಿಕ್ ಸಪೋರ್ಟ್ ಆ್ಯಪ್ ಡೌನ್ ಲೋಡ್ ಮಾಡಿಸಿದ್ದ. ನಂತರ 10 ರೂ. ಬಿಲ್ ಪೇ ಮಾಡಿ ಅಪ್ಲೇಟ್ ಆಗುತ್ತದೆ ಎಂದು ನಂಬಿಸಿ, ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸೈಬರ್ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

13/07/2022 10:46 am

Cinque Terre

45.73 K

Cinque Terre

0

ಸಂಬಂಧಿತ ಸುದ್ದಿ