ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಆಡು, ಹೋತ ಕಳ್ಳತನ, ಕಂಗಾಲಾದ ರೈತ ಕುಟುಂಬ!

ನವಲಗುಂದ: ನವಲಗುಂದ ಪಟ್ಟಣದ ಸಿದ್ದಾಪೂರ ಓಣಿಯ ರೈತ ಭವನದ ಬಳಿ ಮನೆಯ ಹೊರಗೆ ಕಟ್ಟಿದ ಎರಡು ಆಡು, ಎರಡು ಹೊತ ಮರಿಗಳನ್ನು ಕಳ್ಳತನ ಮಾಡಿದ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ.

ಪಟ್ಟಣದ ಯಲ್ಲವ್ವ ಬಾಡಗಂಡಿ ಉರ್ಫ್ ನರಗುಂದ ಅವರ ಮನೆಯ ಮುಂದೆ ಕಟ್ಟಿರುವ ಆಡು, ಹೊತಮರಿಗಳನ್ನು ಚಾಲಾಕಿ ಕಳ್ಳರು ಕದ್ದಿದ್ದಾರೆ ಎನ್ನಲಾಗಿದೆ. ಕಳ್ಳತನವಾಗಿರುವ ಆಡು ಹೋತಮರಿ ಮೇಲೆಯೇ ಕುಟುಂಬ ಉಪಜೀವನ ಮಾಡುತ್ತಾ ಬಂದಿರುವ ರೈತ ಕುಟುಂಬ ಕಂಗಾಲಾಗಿದೆ.

ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಘಟನೆ ನವಲಗುಂದ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Edited By : Shivu K
Kshetra Samachara

Kshetra Samachara

07/07/2022 10:59 pm

Cinque Terre

47.43 K

Cinque Terre

1

ಸಂಬಂಧಿತ ಸುದ್ದಿ