ಧಾರವಾಡ: ಹುಬ್ಬಳ್ಳಿ, ಧಾರವಾಡ ಅವಳಿನಗರದಲ್ಲಿ ಮೇಲಿಂದ ಮೇಲೆ ಕೊಲೆಗಳು, ಕೊಲೆ ಯತ್ನಗಳು ನಡೆಯುತ್ತಲೇ ಇವೆ. ಇತ್ತೀಚಿನ ಎರಡ್ಮೂರು ದಿನಗಳಲ್ಲಿ ಕೊಲೆಗಳು ಹೆಚ್ಚಾಗಿವೆ. ಈಗ ಧಾರವಾಡದ ಮೆಹಬೂಬನಗರದಲ್ಲಿ ಮತ್ತೊಂದು ಕೊಲೆ ಯತ್ನ ನಡೆದಿದೆ.
ಈ ಕೊಲೆ ಯತ್ನದ ದೃಶ್ಯಾವಳಿಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಧಾರವಾಡಿಗರನ್ನು ಬೆಚ್ಚಿ ಬಿಳಿಸಿದೆ.
ಇಕ್ಬಾಲ್ ಎಂಬಾತ ತನ್ನ ಸಹೋದರಿ ಮೇಲೆ ಹಲ್ಲೆ ನಡೆಸಿದ್ದಾನೆ. ಇವರಿಬ್ಬರೂ ಮೆಹಬೂಬ್‌ನಗರದ ದೊಡ್ಡಮನಿ ಹಾಲ್ ಎದುರಿಗೆ ನಿಂತಾಗ ಇಕ್ಬಾಲ್ ಏಕಾಏಕಿ ತನ್ನ ಸಹೋದರಿ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದಾನೆ. ಎರಡ್ಮೂರು ಬಾರಿ ಆಕೆಯ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದಾನೆ. ಕೂಡಲೇ ಅಲ್ಲಿದ್ದವರು ಬಂದು ಆತನನ್ನು ತಡೆದಿದ್ದಾರೆ. ಕೆಳಗೆ ಬಿದ್ದಿದ್ದ ಆ ಮಹಿಳೆಯನ್ನು ಸ್ಥಳಿಯರೇ ಆಸ್ಪತ್ರೆಗೆ ದಾಖಲಿಸಿದ್ದು, ಆಕೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಲ್ಲೆ ನಡೆದಿದೆ ಎಂಬುದು ಗೊತ್ತಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/07/2022 10:22 pm