ಹುಬ್ಬಳ್ಳಿ: ಸಾರ್ವಜನಿಕರ ನೆಮ್ಮದಿ ಹಾಳು ಮಾಡುವ ಯತ್ನಗಳು ಅಲ್ಲಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು (ಗುರುವಾರ) ಬೆಳ್ಳಂಬೆಳಿಗ್ಗೆ ಹಲವು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರೌಡಿಶೀಟರ್‌ಗಳಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ನವನಗರದ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ರೌಡಿಶೀಟರ್‌ಗಳನ್ನ ಠಾಣೆಗೆ ತಂದು ಎಚ್ಚರಿಕೆ ನೀಡಲಾಗಿದೆ. ಹಾಗೆ ನಗರದ ವಿವಿಧ ಪೊಲೀಸ್ ಠಾಣೆಯಲ್ಲೂ ಡ್ರಿಲ್ ಮಾಡಲಾಗಿದೆ. ರೌಡಿಶೀಟರ್‌ಗಳು ಯಾವುದೇ ಪ್ರಕರಣದಲ್ಲಿ ಕಂಡು ಬಂದರೆ ಅವರು ವಿರುದ್ಧ ಕಠಿಣ ಕ್ರಮವನ್ನ ಜರುಗಿಸುವ ಎಚ್ಚರಿಕೆಯನ್ನ ನೀಡಲಾಗಿದೆ.
Kshetra Samachara
23/06/2022 01:26 pm