ಹುಬ್ಬಳ್ಳಿ: ಮನೆಯಲ್ಲಿಯೇ ಕುಳಿತು ಪೆನ್ಸಿಲ್ ತಯಾರಿಸಿ ಹಣ ಗಳಿಸಬಹುದು ಎಂದು ನಂಬಿಸಿ ನಗರದ ವ್ಯಕ್ತಿಯೊಬ್ಬನಿಗೆ 40 ಸಾವಿರ ರೂಪಾಯಿ ವಂಚಿಸಿರುವ ಘಟನೆ ನಡೆದಿದೆ.
ನಗರದ ರುದ್ರಪ್ಪ ಸೊರಟೂರ ಎಂಬುವರೇ ವಂಚನೆ ಒಳಗಾದವರು. ರುದ್ರಪ್ಪ ಸೊರಟೂರ ಫೇಸ್‌ಬುಕ್ ನೋಡುತ್ತಿರುವಾಗ ನಟರಾಜ ಕಂಪನಿಯಿಂದ ಉತ್ಪಾದನೆಯಾಗುವ ಪೆನ್ಸಿಲ್‌ಗಳನ್ನು ಮನೆಯಲ್ಲಿಯೇ ಕುಳಿತು ಪ್ಯಾಕಿಂಗ್ ಮಾಡಿ ಮರಳಿ ಕಂಪನಿಗೆ ಕಳುಹಿಸಿದರೆ ಹೆಚ್ಚಿನ ಹಣ ಗಳಿಸಬಹುದೆಂದು ನಂಬಿಸಿ ವಂಚನೆ ಮಾಡಲಾಗಿದೆ. ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
23/06/2022 11:00 am