ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಫೇಸ್‌ಬುಕ್‌ನಲ್ಲಿ ಹಾಕಿದ್ದ ಜಾಹೀರಾತು ನೋಡಿ ಹಣ ಕಳೆದುಕೊಂಡ ಮಹಿಳೆ!

ಹುಬ್ಬಳ್ಳಿ: ಲೋನ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು 43 ಸಾವಿರ ರೂ. ಕಳೆದುಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಅಮರಗೋಳದ ಐಶ್ವರ್ಯಾ ಎಂಬುವರು ಗೂಗಲ್ ಪ್ಲೇ ಸ್ಟೋರ್‌ನಲ್ಲಿದ್ದ ಇಂಡಿಯಾ ಯೂನಿಯನ್ ಕ್ರೆಡಿಟ್ ಕ್ಯಾಶ್ ಲೋನ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು 43 ಸಾವಿರ ರೂ. ಕಳೆದುಕೊಂಡಿದ್ದಾರೆ.

ಫೇಸ್‌ಬುಕ್‌ನಲ್ಲಿ ಹಾಕಿದ್ದ ಜಾಹೀರಾತು ನೋಡಿ ಐಶ್ವರ್ಯಾ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, 50 ಸಾವಿರ ರೂ. ಸಾಲ ಪಡೆಯಲು ನಿರ್ಧರಿಸಿದ್ದರು. ಅದಕ್ಕೆ ಸಂಬಂಧಿಸಿ ಆಧಾರ ಕಾರ್ಡ್ ಅಪ್ಲೋಡ್ ಮಾಡಿ ಸದಸ್ಯತ್ವ ಹಾಗೂ ಇತರೆ ಶುಲ್ಕವೆಂದು ಹಣ ವರ್ಗಾಯಿಸಿದ್ದರು. ನಂತರ ಸಾಲವನ್ನೂ ನೀಡದೆ ವರ್ಗಾಯಿಸಿದ ಹಣ ವಾಪಸ್ ಸಹ ನೀಡದೆ ವಂಚಿಸಿದ್ದಾರೆ ಎಂದು ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

14/06/2022 09:01 am

Cinque Terre

34.75 K

Cinque Terre

2

ಸಂಬಂಧಿತ ಸುದ್ದಿ