ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೌಡಿಶೀಟರ್ ಅಲ್ತಾಫ್ ಅರೆಸ್ಟ್ : ಸೆಂಟ್ರಲ್ ಜೈಲಿಗೆ ಶಿಫ್ಟ್

ಹುಬ್ಬಳ್ಳಿ: ಕುಖ್ಯಾತ ರೌಡಿಶೀಟರ್ ನಾಗಶೆಟ್ಟಿಕೊಪ್ಪ ನಿವಾಸಿ ಅಲ್ತಾಫ್ ಬೇಪಾರಿಯನ್ನು ಕೇಶ್ವಾಪುರ ಠಾಣೆ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ. ಕಳೆದ 13 ವರ್ಷಗಳಲ್ಲಿ ಹಲವು ಕೊಲೆ, ಕೊಲೆ ಯತ್ನ, ಜೀವ ಬೆದರಿಕೆ ಮತ್ತಿತರ ಅಪರಾಧ ಕೃತ್ಯಗಳಲ್ಲಿ ಅಲ್ತಾಫ್ ಭಾಗಿಯಾಗಿದ್ದ. ಕಳೆದ ವರ್ಷ ಬೆಂಗೇರಿ ಮಾರುಕಟ್ಟೆಯಲ್ಲಿ ವೀರೇಶ ಹೆಗಡ್ಯಾಳ ಎಂಬುವರ ಹತ್ಯೆಯಲ್ಲಿ ಪ್ರಮುಖ ಆರೋಪಿಯಾಗಿದ್ದ.

ಈತ ಮತ್ತೆ ತನ್ನ ಸಹಚರರೊಂದಿಗೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಕಾನೂನು ಸುವ್ಯವಸ್ಥೆಗೆ ಭಂಗ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಗೂಂಡಾ ಕಾಯ್ದೆಯಡಿ ಬಂಧಿಸಿ, ಧಾರವಾಡ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

04/06/2022 11:20 am

Cinque Terre

30.82 K

Cinque Terre

8

ಸಂಬಂಧಿತ ಸುದ್ದಿ